ಕೊಯಿಲ ಲಕ್ಷ್ಮೀ ಎನ್.ಸಪಲ್ಯ ನಿಧನ
ಬಂಟ್ವಾಳ:ಇಲ್ಲಿನ ಕೊಯಿಲ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ನಾಗಪ್ಪ ಸಪಲ್ಯ ಇವರ ಪತ್ನಿ ಲಕ್ಷ್ಮೀ ಎನ್.ಸಪಲ್ಯ (೯೫) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಬಂಟ್ವಾಳ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಸಹಿತ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಕೊಯಿಲ ಸ್ವಗೃಹ ಬಳಿ ಶನಿವಾರ ಮಧ್ಯಾಹ್ನ ನೆರವೇರಿತು.