ಬಂಟ್ವಾಳ ಬಿಜೆಪಿಗೆ ಪದಾಧಿಕಾರಿಗಳ ನೇಮಕ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಸಾರಥ್ಯದಲ್ಲಿ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಪಕ್ಷದ ಹಿರಿಯ ಮುಖಂಡರ ಜೊತೆಗೆ ಯುವ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿದೆ.
ಆರು ಮಂದಿ ಉಪಾಧ್ಯಕ್ಷರು,ಇಬ್ಬರು ಪ್ರಧಾನ ಕಾರ್ಯದರ್ಶಿಗಳು,ಆರು ಮಂದಿ ಕಾರ್ಯದರ್ಶಿಗಳು,ಒರ್ವ ಕೋಶಾಧಿಕಾರಿಯನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಶಿಫಾರಸ್ಸಿನಂತೆ ಜಿಲ್ಲಾ ಬಿಜೆಪಿ ಬಂಟ್ವಾಳ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಿದೆ.
ಪದಾಧಿಕಾರಿಗಳು ಇಂತಿದ್ದು,ಎ.ಗೋವಿಂದ ಪ್ರಭು,ರವೀಶ್ ಶೆಟ್ಟಿ,ಪುಷ್ಪರಾಜ್ ಚೌಟ,ಶ್ರೀಕಾಂತ್ ಶೆಟ್ಟಿ,ಅರುಣ್ ರೋಶನ್ ಡಿಸೋಜ,ರೇಷ್ಮಾ ಶಂಕರಿ ಭಟ್(ಉಪಾಧ್ಯಕ್ಷರು),ಶಿವಪ್ರಸಾದ್ ಶೆಟ್ಟಿ,ಸುದರ್ಶನ್ ಬಜ (ಪ್ರಧಾನಕಾರ್ಯದರ್ಶಿಗಳು),ಪ್ರಭಾಕರ್ ಪ್ರಭು,ಜನಾರ್ಧನ ಬೊಂಡಾಲ,ರಶ್ಮಿತ್ ಶೆಟ್ಟಿ,ಸಂಜೀವ ಪೂಜಾರಿ, ಬಬಿತಾ ಕೋಟ್ಯಾನ್, ಪ್ರೇಮ ಗುರುವಪ್ಪ ( ಕಾರ್ಯದರ್ಶಿಗಳು),ದಿನೇಶ್ ಭಂಡಾರಿ(ಕೋಶಾಧಿಕಾರಿ),ಪ್ರಣಾಮ್‌ರಾಜ್(ಕಾರ್ಯಾಲಯ ಕಾರ್ಯದರ್ಶಿ)ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.