ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಪೌಷ್ಟಿಕ ಆಹಾರವಸ್ತು ಪ್ರದರ್ಶನ”
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಪೌಷ್ಟಿಕ ಆಹಾರವಸ್ತು ಪ್ರದರ್ಶನ” ನಡೆಯಿತು. “ಆಹಾರದ ಘಟಕಗಳು” ಎಂಬ ವಿಜ್ಞಾನ ಪಾಠಕ್ಕೆ ಪೂರಕವಾದ ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು.
೬ನೇ ತರಗತಿಯ ವಿದ್ಯಾರ್ಥಿಗಳು ತಾವೇ ಆಹಾರ ವಸ್ತುಗಳನ್ನು ತಂದು ಆಯೋಜಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಆಹಾರ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಪೌಷ್ಟಿಕ ಆಹಾರವಸ್ತು ಪ್ರದರ್ಶನ ವೀಕ್ಷಿಸಿದರಲ್ಲದೆ ಮಕ್ಕಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಜೊತೆಗೆ ಮಕ್ಕಳು ಪೋಷಕಾಂಶಯುಕ್ತ ಆಹಾರದ ಸವಿಯನ್ನು ಆಸ್ವಾದಿಸಿದರು. ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಮ್ , ಪೂರ್ವಗುರುಕುಲದ ಅಧ್ಯಾಪಕರಾದ ರೂಪಕಲಾ ಹಾಗೂ ಅನ್ನಪೂರ್ಣ, ರಾಜೇಶ್ವರಿ, ಜ್ಯೋತಿಶ್ರೀ, ಬಾಲಕೃಷ್ಣ ,ವೇದಾವತಿ ಉಪಸ್ಥಿತರಿದ್ದರು.