ಇತ್ತೀಚೆಗೆ ನಿಧನರಾದ ಎಲ್ ಎನ್ ಕೂಡೂರು ಅವರ ಶ್ರದ್ಧಾಂಜಲಿ ಸಭೆ
ವಿಟ್ಲ: ಇತ್ತೀಚೆಗೆ ನಿಧನರಾದ ವಿಟ್ಲ ನಗರದ ಅಭಿವೃದ್ಧಿಯ ರುವಾರಿ ವಿಟ್ಠಲ ಎಜುಕೇಶನ್ ಸೊಸೈಟಿ ಯ ಸಂಚಾಲಕ, ವಿಟ್ಲ ಬಸವನಗುಡಿ ಸೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ, ವಿಟ್ಲ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಿಟ್ಲ ಗ್ರಾಮೀಣ ಬ್ಯಾಂಕ್ ಮಾಜಿ ಅಧ್ಯಕ್ಷ ಎಲ್ ಎನ್ ಕೂಡೂರು ಇವರಿಗೆ ವಿಟ್ಲ ಬಿಜೆಪಿ ಕಛೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಬಿಜೆಪಿ ಪ್ರಮುಖರಾದ ಮೋಹನದಾಸ್ ಉಕ್ಕುಡ, ರಾಮದಾಸ ಶೆಣೈ, ಶ್ಯಾಮ್ ಸುಂದರ್ ನೆತ್ತರಕೆರೆ, ನರ್ಸಪ್ಪ ಪೂಜಾರಿ, ಹರೀಶ್ ಸಿ ಹೆಚ್, ವೀರಪ್ಪ ಗೌಡ, ಲೋಕನಾಥ ಶೆಟ್ಟಿ, ಚಂದ್ರಕಾAತಿ ಶೆಟ್ಟಿ, ಜತ್ತಪ್ಪ ಗೌಡ, ಜಗದೀಶ್ ಪಾಣೆಮಜಲು, ಪದ್ಮನಾಭ ಕಟ್ಟೆ ಮತ್ತಿತರರು ಭಾಗವಹಿಸಿದ್ದರು