ಬಾಲಕಿಯ ಚಿಕಿತ್ಸೆಗೆ ಸಹಾಯಧನದ ಚೆಕ್ ವಿತರಣೆ
ಬಂಟ್ವಾಳ: ತುಡರ್ ಸೇವಾ ಟ್ರಸ್ಟ್(ರಿ) ಬಂಟ್ವಾಳ ಇದರ ಮಾಸಿಕ ಸೇವಾ ಯೋಜನೆಯಡಿ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ಬಂಟ್ವಾಳ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಂಟ್ವಾಳ ಹೊಟೇಲ್ “ಸೂರ್ಯಕ್ಯಾಂಟೀನ್” ಮಾಲಕ ಸದಾನಂದ ಪೂಜಾರಿ ಅವರು ಉಡುಪಿ ಪಂದುಬೆಟ್ಟು ಅಂಬಲಪಾಡಿ ವಿಶ್ವರಾಜ್ ಪೂಜಾರಿ ಅವರ ಪುತ್ರಿ ತ್ರಿಷಾ ಪೂಜಾರಿ( 6) ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇವರ ಮುಂದಿನ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ 15 ಸಾ.ರೂ.ವಿನ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.
ಈ ಸಂದರ್ಭ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.