ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ ಕಾರ್ಯಕ್ರಮ
ಬಂಟ್ವಾಳ: ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಮಧುಕರ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.)ನ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ “ಯಕ್ಷಗಾನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಯಕ್ಷಗಾನದ ಜೊತೆ ಸಮಾಜಕ್ಕೆ ನಮ್ಮಿಂದಾಗುವ ಸೇವೆ ಮಾಡಬೇಕೆಂದರು.

ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮಾವಿಕಾಸ ಸಂಯೋಜಕರಾದ ಸುಜಿತ್ ಕುಮಾರ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ,ವಿಶ್ವಗುರು ಭಾರತ ನಿರ್ಮಾಣದಲ್ಲಿ ಯಕ್ಷಗಾನದ ಕಲೆಯ ಪಾತ್ರವು ಮುಖ್ಯವಾಗಬೇಕೆಂದು” ತಿಳಿಸಿದರು.
ಯಕ್ಷಗಾನ ಶಿಕ್ಷಕರಾದ ಅಮ್ಮುಂಜೆ ಮೋಹನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೊದಲ ಹೆಜ್ಜೆಯ ತರಬೇತಿ ನೀಡಿದರು.ನಿವೃತ್ತ ಉಪನ್ಯಾಸಕರಾದ ಪಿ.ಪೂವಪ್ಪ ಶೆಟ್ಟಿ,ವಿಟ್ಲ ಘಟಕದ ಪ್ರಧಾನ ಸಂಚಾಲಕರಾದ ಅರವಿಂದ ರೈ ಮೂರ್ಜೆಬೆಟ್ಟು, ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು.ಶ್ರೀವತ್ಸ ದೇವರ ಸ್ತುತಿಯನ್ನು ಹಾಡಿದರು.
ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಸ್ವಾಗತಿಸಿದರು, ಸಹ ಶಿಕ್ಷಕಿ ಮೇಘಶ್ರೀ ವಂದಿಸಿದರು.