ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಅಭಿಯಾನದ ಪೂರ್ವಭಾವಿಯಾಗಿ ಗಿಡ ನಾಟಿ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯಾದದ್ಯಾಂತ ನಡೆಯಲಿರುವ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಉಡುಪಿ ಪ್ರಾದೇಶಿಕ ವಿಭಾಗದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಗಿಡ ನಾಟಿ ಕಾರ್ಯ ನಡೆಸಲಾಯಿತು.

ಇದೇ ವೇಳೆ ಜುಲೈ 2 ರಂದು ನಡೆಯಲಿರುವ ಕಾರ್ಯಕ್ರಮದ ಹಿನ್ನಲೆಯಲ್ಲಿ ಚಪ್ಪರ ಮುಹೂರ್ತ ವನ್ನು ನೆರವೇರಿಸಲಾಯಿತು.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ , ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್,ಯೋಜನೆಯ ಕೃಷಿ ನಿರ್ದೇಶಕರಾದ ಮನೋಜ್ ಮಿನೇಜಸ್, ಬಂಟ್ವಾಳ ತಾಲೂಕಿನ ವಲಯ ಅರಣ್ಯ ಅಧಿಕಾರಿ ಪ್ರಫುಲ್ ಶೆಟ್ಟಿ, ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ, ಕಾರಿಂಜೆಶ್ವರ ದೇವಸ್ಥಾನದ ವ್ಯವಸ್ತರಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಜಿನರಾಜ್ ಆರಿಗ, ಜಿ. ಪಂ. ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್,ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಾಣಿಕ್ಯ ರಾಜ ಜೈನ್, ರೈತ ಮೋರ್ಚ ಅಧ್ಯಕ್ಷರಾದ ವಿಜಯ ರೈ,ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ, ಕಾವಳಪಡೂರು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವಿಪತ್ತು ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್ , ಕಿಶೋರ್, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಅರಣ್ಯ ಅಧಿಕಾರಿ ಅನಿಲ್,ಫಾರೆಸ್ಟ್ ಗಾರ್ಡ್ ಲಕ್ಷ್ಮೀನಾರಾಯಣ, ಕಾಳಪಡೂರು ಪಂಚಾಯಿತ್ ಪಿಡಿಒ ರಚನ್ ಕುಮಾರ್, ಕೃಷಿ ಅಧಿಕಾರಿ ಜಯರಾಮ್, ಜನಜಾಗೃತಿ ಮೇಲ್ವಿಚಾರಕ ನಿತೇಶ್ , ಕೃಷಿ ಮ್ಯಾನೇಜರ್ ಉಮೇಶ್, ವಗ್ಗ ವಲಯ ಅಧ್ಯಕ್ಷರಾದ ಉಮೇಶ್, ಜನಜಾಗೃತಿ ಸದಸ್ಯರಾದ ಶೇಖರ್, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಪೂಜಾರಿ, ಕ್ಯಾಪ್ಟನ್ ನಿತೇಶ್, ವಗ್ಗ ವಲಯದ ಮೇಲ್ವಿಚಾರಕಿ ಸವಿತಾ , ವಗ್ಗ ವಲಯದ ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರುಗಳು,ನಿಕಟಪೂರ್ವ ಅಧ್ಯಕ್ಷರುಗಳು,ನವ ಜೀವನ ಸಮಿತಿಯ ಸದಸ್ಯರು ಪುಂಜಾಲಕಟ್ಟೆ,ವಾಮದಪದವು, ಕಾಡಬೆಟ್ಟು ಶೌರ್ಯ ಘಟಕದ ಸದಸ್ಯರು, ಒಕ್ಕೂಟಗಳ ಸದಸ್ಯರು ಉಪಸ್ಥಿತರಿದ್ದರು.