ಚಿಣ್ಣರಲೋಕ ಸೇವಾ ಸಂಸ್ಥೆಯ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಯ ಶೈಕ್ಷಣಿಕ ಸಂಭ್ರಮ-2024
ಬಂಟ್ವಾಳ: ಶಿಕ್ಷಣದ ಗುಣಮಟ್ಟದ ವೃದ್ಧಿಯಾಗಿದ್ದು, ಮಕ್ಕಳ ಸಾಧನೆಯೂ ಅದಕ್ಕೆ ಪೂರಕವಾಗಿ ಬೆಳೆದಿದೆ. ಚಿಣ್ಣರಲೋಕ ಸಂಸ್ಥೆಯು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ದೃಷ್ಟಿಯಿಂದ ಬೋಳಂತೂರು ಸರಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸುವ ಜತೆಗೆ ಕಲೆಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಕರಾವಳಿ ಕಲೋತ್ಸವದ ಅಧ್ಯಕ್ಷಸುದರ್ಶನ್ ಜೈನ್ ಹೇಳಿದರು.

ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಬಂಟ್ವಾಳ ಚಿಣ್ಣರ ಲೋಕ ಸೇವಾ ಬಂಧು ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಚಿಣ್ಣರಲೋಕ ಸೇವಾ ಸಂಸ್ಥೆಯ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಯ ಶೈಕ್ಷಣಿಕ ಸಂಭ್ರಮ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜೋತಿಷಿ ಅನಿಲ್ ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಯಾವತ್ತೂ ಪ್ರಯತ್ನ ಮಾಡಿದಾಗ ಚಿಣ್ಣರಲೋಕ ಸಂಸ್ಥೆಯು ಪ್ರತಿಭೆಯನ್ನು ಬೆಳೆಸುವ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು ಅವನತಿ ಅಂಚಿಗೆ ಸಾಗಿದ ಸರಕಾರಿ ಶಾಲೆಯ ಪುರುತ್ವಾನವೂ ಇದರ ಮೂಲಕ ನಡೆದಿರುವುದು ಹೆಮ್ಮೆಯ ವಿಚಾರ ಎಂದರು.
ಸಮಾರಂಭದಲ್ಲಿ ಚಿಣ್ಣರಲೋಕ ಸೇವಾ ಸಂಸ್ಥೆಯ ಪ್ರತಿಭಾ ನ್ವಿತ ವಿದ್ಯಾರ್ಥಿಗಳಾದ ಶ್ರೀನಿಧಿ ಪಿ.ಎಸ್, ದಿಯಾ ರಾವ್ ಕೆ. ಚಿರಾಗ್ ರಾಜ್, ಆಶಿತಾ, ಪ್ರಣಮ್ ವೈ. ಅವರನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಉದ್ಯಮಿಗಳಾದ
ಭುವನೇಶ್ ಪಾಣೆಮಂಗಳೂರು, ಹಂಝ ಬಸ್ತಿಕೋಡಿ, ಚಿಣ್ಣರಲೋಕ ಸೇವಾ ಟ್ರಸ್ಟ್ ಗೌರವ ಸಲಹೆಗಾರ ಸರಪಾಡಿ ಅಶೋಕ ಶೆಟ್ಟಿ ಶಾಲಾ ದತ್ತು ಸಮಿತಿ ಸಂಚಾಲಕ ರಾಮ ಕೃಷ್ಣ ರಾವ್, ಸಹ ಸಂಚಾಲಕ ಐತಪ್ಪ ಪೂಜಾರಿ ಮೊಡಂಕಾಪು, ಗಾಯಮಅಮಿಷ್ ಕುಮಾರ್, ಬೋಳಂತೂರು ಸರಕಾರಿ ಶಾಲಾ ಮುಖ್ಯಶಿಕ್ಷಕಿ ಪ್ರೆಸಿಲ್ಲಾ ಡಿ’ಸೋಜಾ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಮೋಕೆದ ಕಲಾವಿದೆರ್ ಸಂಚಾ ಲಕ ವಿಜಯಕುಮಾರ್ ಅಡ್ಯಾರ್, ಚಿಣ್ಣರಲೋಕ ಸೇವಾ ಬಂಧು ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ವಿಜಯ ಶೆಟ್ಟಿಸಾಲೆತ್ತೂರು ಹಾಗೂಸುರೇಖಾ ಅವರು ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಚಿಣ್ಣರಲೋಕ ಸೇವಾ ಬಂಧು ಆಡಳಿತ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿ, ಪ್ರಜ್ವಲ್ ಎಂ.ಸಿದ್ದಕಟ್ಟೆ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರಸ ಮಂಜರಿ ಹಾಗೂ ಬಂಟ್ವಾಳ ಮೋಕೆದ ಕಲಾವಿದೆರ್ ತಂಡದಿಂದ ಖರ್ಚಿಗ್ ಕಾಸ್ ಇಜ್ಜಿನಾಟಕ ಪ್ರದರ್ಶನಗೊಂಡಿತು.