Published On: Tue, Jun 25th, 2024

ದೈವಸ್ಥಾನ,ಭಜನಾಮಂದಿರದಿಂದ ಸರಣಿಕಳವು

ಬಂಟ್ವಾಳ: ಎರಡು ಗ್ರಾಮಗಳ ಎರಡು  ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ಕಳ್ಳರು ನುಗ್ಗಿ ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಆದಿತ್ಯವಾರ ಮಧ್ಯ ರಾತ್ರಿ ವೇಳೆ ನಡೆದಿದೆ ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದು ಮಂದಿರದೊಳಗೆ ಇದ್ಧ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 3000 ಸಾವಿರ ನಗದನ್ನು ಕಳವು ಮಾಡಿದಲ್ಲದೆ ಗೊದ್ರೇಜ್ ನ ಬಾಗಿಲು ಮುರಿದು ಅದರಲ್ಲಿದ್ದ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಪರಾರಿಯಾಗಿದ್ದಾರೆ.


  ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದೊಳಗೆ ನುಗ್ಗಿದ ಕಳ್ಳರು ಅದರಲ್ಲಿದ್ದ ಡಬ್ಬಿಯನ್ನು ಮುರಿದು ಸುಮಾರು 600 ರೂ ನಗದನ್ನು ದೋಚಿದ್ದಾರೆ.ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಸಾಲ್ಯಾನ್ ಕುಟುಂಬದ ತರವಾಡು ದೈವಸ್ಥಾನದ ಬಾಗಿಲು ಮುರಿದು ಒಳಪ್ರವಶಿಸಿರುವ ಕಳ್ಳರು ಕಾಣಿಕೆ ಡಬ್ಬಿಯನ್ನು‌ಪುಡಿಗೈದು ಅದರಲ್ಲಿದ್ದ ಸುಮಾರು 1000 ಸಾವಿರ ನಗದು ಕಳವು ಮಾಡಿದ್ದಾರೆ.


   ಬಾಳ್ತಿಲ ಗ್ರಾಮದ ಸುಧೆಕ್ಕಾರು ಎಂಬಲ್ಲಿರುವ ರಕ್ತೇಶ್ವರಿ ಗುಳಿಗ ನ ಗರ್ಭಗುಡಿಯ ಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಗರ್ಭಗುಡಿಯೊಳಗಿನ ವಸ್ತುಗಳನ್ನು ‌ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ಕಾಣಿಕೆ ಡಬ್ಬಿ ಒಡೆದು ಹಾಕಿ ಅದರಲ್ಲಿದ್ದ ಹಣ ಮತ್ತು ಭಜನೆಯಿಂದ ಹೊಂದಾಣಿಕೆಗೊಂಡ ಒಟ್ಟು 10,000 ನಗದನ್ನು ಕಳ್ಳರು ಎಗರಿಸಿದ್ದಾರೆ.


  ಮೂರು ಪ್ರಕರಣಗಳ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ನಗರ ಪೊಲೀಸರು  ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.ಪಾಣೆಮಂಗಳೂರು ಮತ್ತು ಕೈಕಂಬ ಭಾಗದಲ್ಲಿ ಕಳೆದೊಂದು ವಾರದಿಂದ ಕಳ್ಳತನ ನಡೆಯುತ್ತಿದ್ದು, ಪೋಲೀಸರ ನಿದ್ದೆಗೆಡಿಸಿದೆ.ಮಳೆಯ ಅರ್ಭಟ ಶುರುವಾಗುತ್ತಿದ್ದಂತೆ ಕಳ್ಳರು ಕೂಡ ಬಾಲಬಿಚ್ಚಿ ತಮ್ಮಕೈಚಳಕ ತೋರಿಸಲಾರಂಭಿಸಿದ್ದಾರೆ.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter