ಸಚಿವ ಶಿವರಾಜ್ ತಂಗಡಗಿ-ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಭೇಟಿ: ಕೊಂಕಣಿ ಭವನದ ನಿರ್ಮಾಣ ಸಂಪೂರ್ಣಗೊಳಿಸಲು ಅನುದಾನಕ್ಕೆ ಮನವಿ
ಮುಂಬಯಿ: ಬೆಂಗಳೂರುನ ವಿಧಾನ ಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನೂತನ ನಾಮ
ನಿರ್ದೇಶಿತ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ನಡೆದ ಸಮಾಲೋಚನೆ ಸಭೆ ನಡೆಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷಜೋಕಿಂ ಸ್ಟ್ಯಾನಿ ಆಲ್ವಾರಿಸ್ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕಳೆದ ಅವಧಿಯಲ್ಲಿ ಕೊಂಕಣಿ ಭವನ ನಿರ್ಮಿಸಲು ೫ ಕೋಟಿ ರೂಪಾಯಿ ಘೋಷಿಸಿದ್ದು ಅದರಲ್ಲಿ ೨ ಕೋಟಿ
ರೂಪಾಯಿ ಕಡಿತ ಗೊಳಿಸಿರುವುದರಿಂದ ಕೊಂಕಣಿ ಭವನದ ನಿರ್ಮಾಣ ಕೆಲಸ ಸ್ಥಗಿತಗೊಂಡಿದೆ.
ಕಡಿತಗೊಳಿಸಿರುವ ೨ ಕೋಟಿ ರುಪಾಯಿ ಅನುದಾನ ತಕ್ಷಣಕ್ಕೆ ಬಿಡುಗಡೆಗೊಳಿಸಿ ಕೊಂಕಣಿ ಭವನದ ಕೆಲಸವನ್ನು
ಸಂಪೂರ್ಣಗೊಳಿಸಲು ಸಹಕಾರ ನೀಡಬೇಕೆಂದು ಮಾನ್ಯ ಸಚಿವರಲ್ಲಿ ಆಲ್ವಾರಿಸ್ ಮನವಿ ಮಾಡಿದರು.
ಸಭೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ವಂ| ಪ್ರಶಾಂತ್ ಮಾಡ್ತಾ, ನವೀನ್ ಲೋಬೊ,
ಸಮರ್ಥ್ ಭಟ್, ರೊನಾಲ್ಡ್ ಕ್ರಾಸ್ತಾ, ಸುನೀಲ್ ಸಿದ್ಧಿ, ಜೇಮ್ಸ್ ಲೊಪೀಸ್, ದಯಾನಂದ್ ಮಡ್ಕೇಕರ್, ಸಪ್ನಾ
ಕ್ರಾಸ್ತಾ ಉಪಸ್ಥಿತರಿದ್ದರು.
ಕೃಪೆ (ಆರ್‌ಬಿಐ)