ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿನ ಲಕ್ಷ್ಮೀ ನಿವಾಸದಲ್ಲಿ ಯಕ್ಷಗಾನ ತರಬೇತಿ
ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿನ ಲಕ್ಷ್ಮೀ ನಿವಾಸದಲ್ಲಿ ಯಕ್ಷಗಾನತರಬೇತಿಯು ಜೂ.22ರಂದು ಶನಿವಾರ ಉದ್ಘಾಟನೆಗೊಂಡಿತು.

“ನೃತ್ಯ ,ಹಾಡುಗಾರಿಕೆ, ಮಾತುಗಾರಿಗೆ, ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು , ಶಿವಮೊಗ್ಗ , ಚಿಕ್ಕಮಂಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆಮಾತಾಗಿದೆ” ಎಂದು ಯಕ್ಷಗಾನ ತರಬೇತುದಾರರಾದ ಗಣೇಶ್‌ಆಚಾರ್ಯ ಕೊಂದಲಕೋಡಿ ಯಕ್ಷಗಾನದ ಮಹತ್ವ ತಿಳಿಸಿದರು. ವೃತ್ತಿಯಲ್ಲಿ ಶಿಲ್ಪಿಯಾಗಿರುವ ಅವರು ಯಕ್ಷಗಾನದ ತರಬೇತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಅಧ್ಯಾಪಕರಾದ ಹೇಮಲತಾ ಸ್ವಾಗತಿಸಿ , ಬಾಲಕೃಷ್ಣ ವಂದಿಸಿದರು.
