ಶ್ರೀ ವೆಂಕಟರಮಣಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆ, ವಿಶ್ವಯೋಗ ದಿನಾಚರಣೆ
ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ವೆಂಕಟರಮಣಸ್ವಾಮಿಕಾಲೇಜಿನಲ್ಲಿಯೋಗದಿನಾಚರಣೆಯನ್ನುಆಚರಿಸಲಾಯಿತು.

ಇದರ ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಗತರಬೇತುದಾರರಾದ ಶ್ರೀ ಚನ್ನಕೇಶವಡಿ.ಆರ್‌ರವರು ಮಾತನಾಡಿ ಗಾಳಿಪಟದಂತೆ ಹರಿದಾಡುವ ಮನಸ್ಸಿಗೆ ಯೋಗವೆಂಬ ಸೂತ್ರದಿಂದ ಹತೋಟಿಗೆತರಲು ಸಾಧ್ಯವಾಗುತ್ತದೆ.

ಯೋಗಸಾಧನೆಯಿಂದ ಮಾನಸಿಕ ಹಾಗೂ ದೈಹಿಕಆರೋಗ್ಯವನ್ನುಕಾಪಾಡಲು ಸಾಧ್ಯವಾಗುವುದು.ವಿದ್ಯಾರ್ಥಿಗಳು ಯೋಗವನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುತ್ತದೆಎಂದುಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್‌ಡಿ.ಎಮ್.ರವರು ಸಾಧನೆಗೆಏಕಾಗ್ರತೆ ಸಹಕಾರಿ ಅದನ್ನುಯೋಗದಿಂದ ಪಡೆಯಲು ಸಾಧ್ಯ.ಯೋಗಾಭ್ಯಾಸದಿಂದ ವೈಯಕ್ತಿಕ ಹಾಗೂ ಸಾಮಾಜಿಕಜೀವನ ಬಲಗೊಳಿಸಲು ಸಾಧ್ಯವಿದೆ.ಯೋಗವೆಂಬ ಅಮೂಲ್ಯವಾದ ವಿದ್ಯೆಯು ನಮ್ಮ ಸನಾತನ ಭಾರತೀಯರ ಕೊಡುಗೆಯಾಗಿದೆ ಎಂದರು.
ವೇದಿಕೆಯಲ್ಲಿಎಸ್.ವಿ.ಎಸ್. ಪದವಿಪೂರ್ವಕಾಲೇಜಿನಉಪಪ್ರಾಂಶುಪಾಲ ಹಾಗೂ ಎನ್.ಸಿ.ಸಿ. ಅಧಿಕಾರಿ ಲೆ.ಪ್ರದೀಪ್ ಪೂಜಾರಿ ಹಾಗೂಸಮೂಹ ಶಿಕ್ಷಣ ಸಂಸ್ಥೆಯಕ್ರೀಡಾಮೇಲ್ವಿಚಾರಕರಾದ ಮಹೇಶ್ ಶೆಟ್ಟಿ, ಉಪಸ್ಥಿತರಿದ್ದರು.