ಮಂಚಿ ಕ್ಯಾಂಪ್ಕೋ ನಿಯಮಿತಶಾಖೆಯಲ್ಲಿ ಯೋಗ ದಿನಾಚರಣೆ
ಬಂಟ್ವಾಳ: ಕ್ಯಾಂಪ್ಕೋ ನಿಯಮಿತ ಮಂಚಿ ಶಾಖೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ತರಬೇತುಗಾರರಾಗಿ ಸಂಸ್ಥೆಯ ಸದಸ್ಯರಾದ ರಮೇಶ್ ರಾವ್ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತರಬೇತುದಾರರು ಯೋಗದ ಇತಿಹಾಸ , ಉಪಯೋಗ ಮತ್ತು ಅದರ ಪ್ರಯೋಜನಗಳ ಮಾಹಿತಿ ನೀಡಿದರು. ಯೋಗವನ್ನು ಜೀವನದ ಒಂದು ಭಾಗವಾಗಿ ಸ್ವೀಕರಿಸುವಂತೆ ಮಾರ್ಗದರ್ಶನ ನೀಡಿದರು.
ಲಘು ವ್ಯಾಯಾಮಗಳೊಂದಿಗೆ ಶುರುವಾದ ಕಾರ್ಯಕ್ರಮವು ಪ್ರಾಣಾಯಾಮ, ಕಪಾಲಭಾತಿ ಮತ್ತು ಸೂರ್ಯ ನಮಸ್ಕಾರಗಳನ್ನು ಒಳಗೊಂಡಿತು. ಶಾಖೆಯ ವ್ಯವಸ್ಥಾಪಕರು ಸ್ವಾಗತಿಸಿ,ವಂದಿಸಿದರು. ಸಿಬ್ಬಂದಿಗಳು ಹಾಗು ಸಾಮಾಜಿಕ ಕಾರ್ಯಕರ್ತರಾದ ದಿನಕರ್ ಮಿತ್ತಮಜಲುರವರು ಭಾಗವಹಿಸಿದ್ದರು.