ಉಳಾಯಿಬೆಟ್ಟು ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆ ದರೋಡೆ : ಚಾಕು ತೋರಿಸಿ ದರೋಡೆ
ಕೈಕಂಬ: ಉಳಾಯಿಬೆಟ್ಟು ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡವೊಂದು ಚಾಕು ತೋರಿಸಿ ಮನೆಮಂದಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗ ನಗದನ್ನು ದೋಚಿರುವ ಘಟನೆ ಶುಕ್ರವಾರ ನಡೆದಿದೆ.

ಉಳಾಯಿಬೆಟ್ಟಿನಲ್ಲಿರುವ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಮನೆಗೆ ಸುಮಾರು 9 ಗಂಟೆಗೆ ಎಂಟು ಮಂದಿ ದರೋಡೆಕೋರರ ತಂಡ ಮನೆಯೊಳಗೆ ಪ್ರವೇಶಿಸಿ ಮನೆ ಮಂದಿಗೆ ಚಾಕು ತೋರಿಸಿ ಬೆದರಿಸಿ ಬಳಿಕ ಮನೆಮಂದಿಯನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾಗಿದ್ದಾರೆ,
ಪದ್ಮನಾಭ ಕೋಟ್ಯಾನ್ ನೀಡಿದ ದೂರಿನಲ್ಲಿ ದರೋಡೆಕೋರರು ಹಿಂದಿಯಲ್ಲಿ ಮಾತಡಿತ್ತಿದ್ದು ಪ್ಯಾಂಟ್ ಶರ್ಟ್ ಧರಿಸಿದ್ದಾರೆ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಮನೆಯಲ್ಲಿದ್ದ ಕಪಾಟುಗಳಲ್ಲಿ ಇದ್ದ ನಗ ನಗದು ದೋಚಿ, ಬಳಿಕ ಹೊರಾಂಗಣದಲಿದ್ದ ಅವರ ವಾಹನವನ್ನು ದರೋಡೆಕೋರರು ತೆಗೆದುಕೊಂಡು ಹೋಗಿದ್ದು ಮನೆಯಿಂದ ಕೆಲ ದೂರದಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.