ತಿರುವೈಲು : ಪೌರ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ
ಕೋಟ್ಯಂತರ ರೂ. ವೆಚ್ಚದ ವೆಟ್‌ವೆಲ್‌ಗೆ ಅಪಾಯ ಚರ್ಚೆ
ಕೈಕಂಬ: ವಾಮಂಜೂರು ತಿರುವೈಲು ವಾರ್ಡ್ನ ಅಮೃತನಗರದ ಪೌರ ಸಮಿತಿ(ರಿ) ಇದರ ೧೧ನೇ ವಾರ್ಷಿಕ ಮಹಾಸಭೆ ಸಮಿತಿ ಅಧ್ಯಕ್ಷ ಲಕ್ಷö್ಮಣ್ ಶೆಟ್ಟಿಗಾರ ಅವರ ಅಧ್ಯಕ್ಷತೆಯಲ್ಲಿ ಜೂ. ೧೬ರಂದು ಅಮೃತನಗರದಲ್ಲಿ ನಡೆಯಿತು.ಮಂಗಳೂರು ತಿರುವೈಲು ವಾರ್ಡ್ನ ಕಾರ್ಪೋರೇಟರ್ ಹೇಮಲತಾ ಆರ್. ಸಾಲ್ಯಾನ್ ಮಾತನಾಡಿ, ಸಮಿತಿಯೊಂದಿಗೆ ಸದಾ ಇರುವ ನಾನು, ಈ ಪ್ರದೇಶದ ಜನರ ಕುಂದುಕೊರತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವೆ ಎಂದರು.
ಕಳೆದ ಬಾರಿ ಯಶಸ್ವಿಯಾಗಿ ಆಯೋಜಿಸಲಾದ ಅಮೃತನಗರ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು, ಸಮಿತಿಯ ಕಾರ್ಯವೈಖರಿ ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ ಸಮಿತಿಗೆ ಮಕ್ಕಳು ಹಾಗೂ ವಿಶೇಷ ವ್ಯಕ್ತಿಗಳ ಸೇರ್ಪಡೆಗೊಳಿಸಬೇಕು ಎಂದು ಸಲಹೆ ಇತ್ತರು.
ಸಮಿತಿಯ ಇನ್ನೋರ್ವ ಉಪಾಧ್ಯಕ್ಷ ಬಾಲಕೃಷ್ಣ ಮಾಸ್ಟರ್ ಮಾತನಾಡಿ, ರಾಷ್ಟಿçÃಯ ಹೆದ್ದಾರಿ ೧೬೯ ಕೆತ್ತಿಕಲ್‌ನಲ್ಲಿ ಗುಡ್ಡದ ಮಣ್ಣು ಕೊರೆಯಲಾದ ಕಾರಣ ಮೇಲ್ಭಾಗದ ಅಮೃತನಗರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು ೧೧ ಕೋ. ರೂ. ವೆಚ್ಚದ ವೆಟ್‌ವೆಲ್ ಯೋಜನೆಗೆ ಅಪಾಯ ಕಾದಿದ್ದು, ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಗಮನಸೆಳೆಯಲಾಗಿದೆ. ಎಲ್ಲವೂ ಸರಿ ಹೊಂದಿದಲ್ಲಿ ಮುಂದಿನ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ವೆಟ್‌ವೆಲ್ ಕಾರ್ಯಾರಂಭಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಲಕ್ಷö್ಮಣ್ ಶೆಟ್ಟಿಗಾರ ಸ್ವಾಗತಿಸಿದರು. ಕು. ಸಾಧನಾ ಮತ್ತು ಕು. ಸ್ಪಂದನಾ ಪ್ರಾರ್ಥನೆಗೈದರು. ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಂದ ಎಚ್. ಎಸ್., ಅವರು ವಾರ್ಷಿಕ ವರದಿ ಓದಿದರು. ಸುಧಾಕರ ಕಾರಂತ ಲೆಕ್ಕಪತ್ರ ಮಂಡಿಸಿದರು. ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಅವರು ಸಮಿತಿಗೆ ಸೇರಿಸಲಾದ ಹೊಸ ಪದಾಧಿಕಾರಿಗಳ ಹೆಸರು ಓದಿದರು. ಸಮಿತಿ ಉಪಾಧ್ಯಕ್ಷ ಸ್ಟಾö್ಯನಿ ಕುಟಿನ್ಹೋ ಇದ್ದರು. ಪದಾಧಿಕಾರಿ ಹೇಮೇಂದ್ರ ವಂದಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಕೆಲವು ಸದಸ್ಯರು ತಮ್ಮ ಪ್ರದೇಶದಲ್ಲಿ ಬೀದಿದೀಪ, ಒಳಚರಂಡಿ, ತ್ಯಾಜ್ಯ ಸಮಸ್ಯೆಗಳ ಬಗ್ಗೆ ಸಮಿತಿಯ ಗಮನಸೆಳೆದರು.