ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವ ಮೂಲಕ ಮನುಷ್ಯತ್ವದ ವ್ಯಕ್ತಿತ್ವವನ್ನು ನಿರ್ಮಿಸುವ ಕಾರ್ಯ ಆಗಬೇಕು: ಸ್ವಾಮಿ ಜಿತಕಾಮಾನಂದಜೀ ಮಹಾರಾಜ್
ಪಲ್ಲಿಪಾಡಿಯಲ್ಲಿ ೭೫ ಕೋ.ರೂ.ವೆಚ್ಚದ “ರಾಮಕೃಷ್ಣ ವಿದ್ಯಾದೇಗುಲ”ಕ್ಕೆ ಭೂಮಿಪೂಜೆ
ಕೈಕಂಬ: ಬಂಟ್ಚಾಳ:ತಾಲೂಕಿನ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ಕನಸಿನಂತೆ ನಿರ್ಮಿಸಲುದ್ದೇಶಿಸಿರುವ ವಿದ್ಯಾದೇಗುಲಕ್ಕೆ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿಯಲ್ಲಿ ಸುಮಾರು ೭೫ ಕೋ.ರೂ.ವೆಚ್ಚದಲ್ಲಿ “ರಾಮಕೃಷ್ಣ ವಿದ್ಯಾದೇಗುಲ”ಕ್ಕೆ ಭಾನುವಾರ ಭೂಮಿಪೂಜೆ ನೆರೆವೇರಿಸಲಾಯಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಅವರು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನಗೈದು ಮಕ್ಕಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ದಿಷ್ಠವಾದ ಗುರಿಯನ್ನು ಹೊಂದಬೇಕು,ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವ ಮೂಲಕ ಮನಷ್ಯತ್ವದ ವ್ಯಕ್ತಿತ್ವವನ್ನು ನಿರ್ಮಿಸುವ ಕಾರ್ಯ ಆಗಬೇಕು ಎಂದರು.
ಪರೀಕ್ಷೆಯನ್ನೇ ಗುರಿಯನ್ನಾಗಿಸಿ ಶಿಕ್ಷಣ ನೀಡುವಂತಾಗಬಾರದು ಸ್ವಾಮೀ ವಿವೇಕಾನಂದರ ಆಶಯದಂತೆ ಸಮಾಜದಲ್ಲಿ ಆಶಾಮನೋಭಾವನೆಯ,ಉತ್ತಮ ಪ್ರಜೆಯಾಗಿ ವ್ಯಕ್ತಿತ್ವ ನಿರ್ಮಿಸುವ ಶಿಕ್ಷಣದ ಅಗತ್ಯವಿದೆ ಎಂದ ಸ್ವಾಮೀಜಿ ಅವರು ಸರಸ್ವತಿ ಆರಾಧನೆಯ ಈ ವಿದ್ಯಾದೇಗುಲದಲ್ಲಿ ಮಕ್ಕಳಿಗೆ ಸಂಸ್ಕಾರ,ಸAಸ್ಕೃತಿ,ಶೃದ್ದೆ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ,ಪ್ರಸ್ತುತ ಭಾರತ ನಿರ್ಣಾಯಕ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ೨೦೪೭ ರ ವಿಕಸಿತ ಭಾರತದ ಕನಸಿಗೆ ಪೂರಕವಾಗಿ ಎಲ್ಲಾ ದಾರ್ಶನಿಕರ ಮಾತಿನಂತೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಕಾರ್ಯ ಈ ವಿದ್ಯಾದೇಗುಲದಲ್ಲಿ ಆಗಲಿ ಎಂದು ಹಾರೈಸಿದರಲ್ಲದೆ ರಾಮಕೃಷ್ಣ ಮಠದ ಭಕ್ತನ ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರಸೆಯಿತ್ತರು.
ರಾಮಕೃಷ್ಣ ಆಶ್ರ‍್ರಮಗಳ ವಿದ್ಯಾ ಸಂಸ್ಥೆಗಳು ಸ್ವಾಮಿಜಿಯವರ ನೇತೃತ್ವದಲ್ಲಿ ನಡೆಯುವುದರಿಂದ ಅಲ್ಲಿಯ ಸಂಸ್ಥೆಗಳಲ್ಲಿ ಶಿಸ್ತುಬದ್ದತೆ ಇರುತ್ತದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ್ ಹೆಗ್ಡೆ ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಮಾಜಿ ಸಚಿವ ಬಿ.ರಮಾನಾಥ ರೈ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿ ಮಾತನಾಡಿದರು.
ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ರೂಪಶ್ರೀ,ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧ ಲೋಕೇಶ್ ಶುಭಹಾರೈಸಿದರು. ರಾಮಕೃಷ್ಣ ವಿದ್ಯಾ ದೇಗುಲದ ಸಮಿತಿ ಸದಸ್ಯರಾದ ಮಂಜುನಾಥ್ ಪ್ರಭು, ಡಾ. ಜಯಕರ ಮಾರ್ಲ, ಚಂದ್ರಹಾಸ ಪಲ್ಲಿಪಾಡಿ ಏಕನಾಥ್ ಪ್ರಭು, ಸುದೇಶ್ ರೈ, ಭುವನೇಶ್ ಪಚಿನಡ್ಕ, ಪಿ.ವಿ ರೈ, ಶರುಣ್ ಅಂಚನ್,ಆರ್ಕಿಟೆಕ್ಟ್ ನರೇಶ್ ಪೂಂಜ ಮೊದಲಾದವರು ಉಪಸ್ಥಿತರಿದ್ದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಪ್ರಸ್ತಾವನೆಗೈದು ಈ ವಿದ್ಯಾದೇಗುಲದಲ್ಲಿಎಲ್ ಕೆ ಜಿ ಯಿಂದ ಪ.ಪೂ.ವರೆಗಿನ ಆಂಗ್ಲ ಮಾಧ್ಯಮ ಶಿಕ್ಷಣವಿದ್ದು ,ಪಿಯೂಸಿಗೆ ಸಿಬಿಎಸ್ ಸಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಗುರುಕುಲ ಮಾದರಿಯ ಶಿಕ್ಷಣ, ವಿದ್ಯಾರ್ಥಿಗಳಿಗೆ ವಸತಿ ಸಂಕೀರ್ಣ ಹಾಗೂ ಕೌಶಲ್ಯಾಭಿವೃದ್ಧಿ ಸಂಬAಧಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ವಿವೇಕಾನಂದ ಹ್ಯೂಮನ್ ಸೆಂಟರ್ ಕಟ್ಟಡವು ಇಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಸುರತ್ಕಲ್ ಗೋವಿಂದಾಸ್ ಕಾಲೇಜ್‌ನ ಪ್ರಾಧ್ಯಾಪಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.