ಜೂ.16 ರಂದು ಪಲ್ಲಿಪಾಡಿಯಲ್ಲಿ 75 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ”ರಾಮಕೃಷ್ಣ ವಿದ್ಯಾದೇಗುಲ”ಕ್ಕೆ ಭೂಮಿಪೂಜೆ ನೆರವೇರಲಿದೆ
ಪೊಳಲಿ: ಬಂಟ್ಚಾಳತಾಲೂಕಿನ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನ ವತಿಯಿಂದ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಿರ್ಮಿಸಲುದ್ದೇಶಿಸಿರುವ “ರಾಮಕೃಷ್ಣ ವಿದ್ಯಾದೇಗುಲ”ಕ್ಕೆ ಜೂ.16 ರಂದು ಬೆಳಿಗ್ಗೆ 8.30 ಕ್ಕೆ ಭೂಮಿಪೂಜೆ ನೆರೆವೇರಿಸಲಾಗುವುದು ಎಂದು ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ.
ಶುಕ್ರವಾರ ಆಶ್ರಮದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಗಳು ಒಟ್ಟು 75 ಕೋ.ರೂ.ವೆಚ್ಚದಲ್ಲಿ ಶಿಕ್ಷಣಾಭಿಮಾನಿಗಳು,ದಾನಿಗಳ ಹಾಗೂ ಶಾಲಾ ಸಮಿತಿಯ ನೆರವಿನಲ್ಲಿ ಈ ವಿದ್ಯಾದೇಗುಲವನ್ನು ನಿರ್ಮಿಸಲಾಗುತ್ತಿದೆ ಎಂದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಅವರು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನಿಉಡಲಿದ್ದಾರೆ,
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಎನ್. ವಿನಯ್ ಹೆಗ್ಡೆ ,ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಮಾಜಿ ಸಚಿವ ಬಿ.ರಮಾನಾಥ ರೈ,ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ರೂಪಶ್ರೀ,ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧ ಲೋಕೇಶ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ವಿದ್ಯಾರ್ಜನೆಗೆ ಪ್ರಶಸ್ತವಾದ ಪ್ರಶಾಂತ, ನಯನ ಮನೋಹರವಾದ ವಾತಾವರಣವನ್ನು ಹೊಂದಿರುವ ಸುಮಾರು 6 ಎಕ್ರೆ ಜಮೀನಿನಲ್ಲಿ ಈ ವಿದ್ಯಾದೇಗುಲದ ನಿರ್ಮಾಣವಾಗಲಿದ್ದು, ಎಲ್ ಕೆ ಜಿ ಯಿಂದ ಪ.ಪೂ.ವರೆಗಿನ ಆಂಗ್ಲ ಮಾಧ್ಯಮ ಶಿಕ್ಷಣವಿದ್ದು ,ಪಿಯೂಸಿಗೆ ಸಿಬಿಎಸ್ ಸಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಸುಮಾರು 18.65 ಕೋ.ರೂ.ವೆಚ್ಚದಲ್ಲಿ ಮಕ್ಕಳ ಮಾನಸಿಕ,ದೈಹಿಕ ಬೆಳವಣಿಗೆ ಎಲ್ಲಾರೀತಿಯ ವ್ಯವಸ್ಥೆಯನ್ನು ಹೊಂದಿರುವ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ.
ಎಂದ ಶ್ರೀಗಳು 5.6 ಕೋ.ರೂ.ವೆಚ್ಚದಲ್ಲಿ ಗುರುಕುಲ,11.92 ಕೋ.ರೂ.ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸಂಕೀರ್ಣ ಹಾಗೂ ಕೌಶಲ್ಯಾಭಿವೃದ್ಧಿ ಸಂಬಂಧಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ 16.37 ಕೋ.ರೂ.ವೆಚ್ಚದಲ್ಲಿ ವಿವೇಕಾನಂದ ಹ್ಯೂಮನ್ ಸೆಂಟರ್ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.
ಮಕ್ಕಳನ್ನು ದೇಶದ ಉತ್ತಮ,ಆದರ್ಶ ಪ್ರಜೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮೌಲ್ಯಾಧರಿತವಾದ ಮತ್ತು ಮಾದರಿ ಶಿಕ್ಷಣವನ್ನು ನೀಡಲಾಗುತ್ತದೆ.ಅದೇರೀತಿ ಇಲ್ಲಿ ರಾಜ್ಯ ಮಟ್ಟದ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಿಸುವ ಯೋಜನೆಯು ಇದೆ ಎಂದು ಸ್ವಾಮೀಜಿ ವಿವರಿಸಿದರು.
ರಾಮಕೃಷ್ಣ ತಪೋವನದ ವತಿಯಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳ ನಡೆಯುತ್ತಿದೆಯಲ್ಲದೆ ಆರೋಗ್ಯ,ಶಿಕ್ಷಣ,ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು,ಮಹಿಳೆಯರ ಸ್ವಾವಲಂಬಿಬದುಕಿಗೆ ಪೂರಕವಾದ ತರಬೇತಿಗಳು, ಯಕ್ಷಗಾನ,ಸ್ಕೇಟಿಂಗ್,ಕರಾಟೆಯಂತಹ ಸಮರಕಲೆಗಳ ತರಬೇತಿ ಸ್ವಚ್ಚತಾ ಅಭಿಯಾನ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ನಿರಂತರವಾಗಿ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖ ಚಂದ್ರಹಾಸ ಪಲ್ಲಿಪಾಡಿ ಉಪಸ್ಥಿತರಿದ್ದರು.