ತಾರಿಕರಿಯ ಪ್ರಾ. ಶಾಲಾ ಮಕ್ಕಳಿಗೆ ಗುರುಪುರ
ವ್ಯ.ಸೇಸ. ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ
ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಿಕರಿಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವತಿಯಿಂದ ವರ್ಷಂಪ್ರತಿಯAತೆ ಈ ಬಾರಿ ಗುರುವಾರ(ಜೂ. ೧೩) ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
![](https://www.suddi9.com/wp-content/uploads/2024/06/gur-june-13-book-distribution-2-650x488.jpg)
ಅಧ್ಯಕ್ಷತೆ ವಹಿಸಿದ್ದ ವ್ಯವಸಾಯ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಅವರು ಶಾಲೆಯ ಒಂದರಿAದ ೭ನೇ ತರಗತಿಯ ಎಲ್ಲ ಮಕ್ಕಳಿಗೆ ಪುಸ್ತಕ ವಿತರಿಸಿದರು. ಸಂಘದ ಉಪಾಧ್ಯಕ್ಷ ಶೀನ ಕೋಟ್ಯಾನ್, ನಿರ್ದೇಶಕರಾದ ಜಿ. ಎಂ. ಉದಯ ಭಟ್, ನಳಿನಿ ಶೆಟ್ಟಿ, ಲತಾ ಶೆಟ್ಟಿ, ಪಂಚಾಯತ್ ಸದಸ್ಯೆ ಶಶಿಕಲಾ, ಛಾಯಾ, ಶಾಲಾ ಮುಖ್ಯ ಶಿಕ್ಷಕಿ ರಮಾದೇವಿ, ಶಿಕ್ಷಕಿಯರಾದ ಪ್ರೀತಿ ಮಾರಿಯಾ ನೊರೊನ್ಹಾ, ಎಸ್‌ಡಿಎಂಸಿ ಅಧ್ಯಕ್ಷೆ ಲತಾ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಭಾಕರ ಭಿಡೆ, ಮಕ್ಕಳು, ಮಕ್ಕಳ ಪೋಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.
![](https://www.suddi9.com/wp-content/uploads/2024/06/gur-june-13-book-distribution-3-650x488.jpg)