Published On: Sat, Jun 22nd, 2024

ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜ್‌ನ ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆ

ಮುಂಬಯಿ : ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜ್‌ನ ವಿದ್ಯಾರ್ಥಿಗಳು ಇಂದಿಲ್ಲಿ ಶುಕ್ರವಾರ ಶ್ರೀ ಜೈನ ಮಠದ ಬಳಿ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಬೆಳಿಗ್ಗೆ ಯೋಗಾಸನಾ ಮಾಡುದರ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು. ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಯೋಗಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಹಾಗೂ ಯೋಗದ ವಿವಿಧ ಆಸನಗಳ ಪರಿಚಯವನ್ನು ಮಕ್ಕಳಿಗೆ ಸ್ವಾಮೀಜಿ ತಿಳಿಸಿಕೊಟ್ಟರು.

ಸರಳ ಯೋಗದ ಆಸನಗಳಾದ ಪದ್ಮಾಸನ ವೀರಾಸನಾ ಶಲಾಭಾಸನಾ, ಪರ್ವತಾಸನಾ, ವೃಕ್ಷಾಸನ ಸರ್ವಾoಗಸನಾ ಯೋಗ ಅಸನಗಳ ರಾಜ ಶಿರ್ಷಾ ಸನಾ ಕೂಡಾ ಮಾಡಿ ಅದರ ಪ್ರಯೋಜನ ತಿಳಿಸಿದ ಶ್ರೀಗಳು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕೊಡುಗೆಗಳಲ್ಲಿ ಯೋಗ ಹಾಗೂ ಧ್ಯಾನವು ಶ್ರೇಷ್ಠ ಜೀವನ ಕಲೆಯಾಗಿದ್ದು ಅದಿಯೋಗಿ ಭಗವಾನ್ ಆಧಿನಾಥರು ಸಹಸ್ರ ಸಹಸ್ರ ವರ್ಷಗಳ ಪೂರ್ವದಲ್ಲೇ ಯೋಗ ಭೋದಿಸಿದ್ದರು. ಮಾನವ ಮನಸು ಹಾಗೂ ದೇಹ ಅರೋಗ್ಯಕ್ಕೆ ಯೋಗ ಪೂರಕವಾಗಿದ್ದು ದಿನಾ ಬೆಳಿಗ್ಗೆ ಅನುಲೋಮ ವಿಲೋಮ ಮಾಡುವ ವಿದ್ಯಾರ್ಥಿಗಳು ಉತ್ಸಾಹದಿಂದ ಕಲಿಕೆಯಲ್ಲಿ ಮುಂದಿರಲು ಸಾಧ್ಯ ಎಂದು ಹರಸಿದರು.

ದ್ವಿತೀಯ ಪಿಯು ವಿದ್ಯಾರ್ಥಿನಿಯರಾದ ಕು| ಸ್ವಾತಿ ಹಾಗೂ ಕು| ಮನಸ್ವಿನಿ ಕೆಲವು ಆಸನಗಳನ್ನು ತಿಳಿಸಿಕೊಟ್ಟರು. ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕ ವೃಂದ ಉಪಸ್ಥಿತರಿದ್ದು ವಿದ್ಯಾಥಿsðಗಳು ವಿವಿಧ ಯೋಗದ ಆಸನಗಳನ್ನು ಮಾಡಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತಾ ವಂದಿಸಿದರು.

ಕೃಪೆ, (ಆರ್‌ಬಿಐ)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter