ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆ ಬೆಳ್ಳಿ ಪದಕ ಗಳಿಸಿದ ರಿಧನ್ಯಾ ಡಿ.ಗಾಣಿಗ
ಮೂಡಬಿದಿರೆ: ಪಶ್ಚಿಮ ಬಂಗಾಳದ ಸಿಲಿಗುರಿ ಎಂಬಲ್ಲಿ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಶನ್ ವತಿಯಿಂದ ಈಚೆಗೆ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿದ್ದ ರಿಧನ್ಯಾ ಡಿ.ಗಾಣಿಗ ಬೆಳ್ಳಿ ಪದಕ ಗಳಿಸಿದ್ದಾರೆ.

ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿನಿ ಆಗಿರುವ ರಿಧನ್ಯಾ ಡಿ.ಗಾಣಿಗ ಇವರು -೫೦ ಬಾಲಕಿಯರ ಲೈಟ್ ಕಾನ್ಟೆಕ್ಸ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದರು. ಈಕೆ ಮಂಗಳೂರು ಸೈಂಟ್ ಅಲೋಸಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಗೆ ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ಸಂಸ್ಥೆ ಮುಖ್ಯಶಿಕ್ಷಕ ನಿತಿನ್ ಎನ್.ಸುವರ್ಣ ಮತ್ತು ಶಿಕ್ಷಕ ಶಿವಪ್ರಸಾದ್ ತರಬೇತಿ ನೀಡಿದ್ದಾರೆ.

ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿ ಬೆಳ್ಳಿ ಪದಕ ಗಳಿಸಿದ ರಿಧನ್ಯಾ ಡಿ.ಗಾಣಿಗ ಇವರನ್ನು ಮೂಡುಬಿದ್ರೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಮಂಗಳವಾರ ಅಭಿನಂದಿಸಿದರು. ಸತ್ಯಜಿತ್ ಸುರತ್ಕಲ್ ಮತ್ತಿತರರು ಇದ್ದರು.
ಈಕೆ ಮಂಗಳೂರು ಯೆಯ್ಯಾಡಿ ನಿವಾಸಿ ಧನ್ ರಾಜ್ ಮತ್ತು ಪಾಣೆಮಂಗಳೂರು ಸೌಮ್ಯಾ ಮರ್ಧೋಳಿ ದಂಪತಿ ಪುತ್ರಿ.