ಹಿರಿಯ ಛಾಯಗ್ರಾಹಕ ಮೂಡಬಿದಿರೆ ಸುಷ್ಮಾ ಸ್ಟುಡಿಯೋ ಮಾಲಕ ಸುಬ್ಬು ನಿಧನ
ಮೂಡಬಿದ್ರೆ: ಎಸ್‌ಕೆಪಿಎ ಮೂಡಬಿದಿರೆ ವಲಯದ ಹಿರಿಯ ಸದಸ್ಯರಾದ, ಸುಷ್ಮಾ ಸ್ಟುಡಿಯೋ ಮಾಲಕರಾದ ಸುಬ್ರಹ್ಮಣ್ಯ ಯಾನೇ ಸುಬ್ಬು (55) ಜು.26ರಂದು ಬುಧವಾರ ನಿಧನಹೊಂದಿದರು.
ಇವರು ಮೂಡಬಿದಿರೆಯಲ್ಲಿ ಕಳೆದ ಮೂವತ್ತು ವಷಗಳಿಂದ ಛಾಯವೃತ್ತಿಯನ್ನು ಮಾಡಿಕೊಂಡು ಹೆಸರಾಂತ ಫೋಟೋಗ್ರಾಪರ್ ಆಗಿ ಎಲ್ಲರೋಂದಿಗೆ ಆತ್ಮೀಯರಾಗಿದ್ದು ಸುಬ್ರಹ್ಮಣ್ಯ ಎಂಬ ನಾಮಕರಣ ಹೊಂದಿದ್ದ ಅವರನ್ನು ಸುಬ್ಬು ಎಂದೇ ಅವರ ಆತ್ಮೀಯರು ಕರೆಯುತ್ತಿದ್ದು ಅವರು ಪತ್ರಿಕೆಗಳ ಛಾಯಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಅಲ್ಲದೇ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿ ಸೈ ಏನಿಸಿಕೊಂಡಿದ್ದಾರೆ. ಅವರಿಗೆಎದೆ ನೋವು ಕಾಣಿಸಿಕೊಂಡ ಇನ್ನೆಲೆಯಲ್ಲಿ ತಡ ರಾತ್ರಿ ನಗರದ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಹೃದಯಘಾತದಿಂದ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಕಾಲಿಕ ನಿಧನಕ್ಕೆ ಛಾಯಗ್ರಾಹಕರು ಸಂತಾಪ ಸೂಚಿಸಿದ್ದಾರೆ.