ಬೋಳಂತೂರು ಸ.ಶಾಲೆಯಲ್ಲಿ “ಯಕ್ಷ ಧ್ರುವ ಯಕ್ಷ ಶಿಕ್ಷಣ”ಕ್ಕೆ ಚಾಲನೆ
ಬಂಟ್ವಾಳ: ಚಿಣ್ಣರ ಲೋಕ ಸೇವಾಬಂಧು ದತ್ತು ಸ್ವೀಕರಿಸಿ ಉನ್ನತೀಕರಿಸಿದ ತಾಲೂಕಿನ ಬೋಳಂತೂರು ಸರಕಾರಿ ಶಾಲೆಯಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಪ್ರಾಯೋಜಿತ “ಯಕ್ಷ ಧ್ರುವ ಯಕ್ಷ ಶಿಕ್ಷಣ”ಕ್ಕೆ ಚಾಲನೆ ನೀಡಲಾಯಿತು.ಶಾಲಾ ಮೇಲುಸ್ತುವಾರಿ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಯಕ್ಷ ಶಿಕ್ಷಣವನ್ನು ಉದ್ಘಾಟಿಸಿ ಶುಭಹಾರೈಸಿದರು.
ಹಿರಿಯ ಯಕ್ಷಗಾನ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿಯವರು ಮಾತನಾಡಿ, ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿಯವರ ದೂರ ದೃಷ್ಟಿಯ ಈ ಯಕ್ಷ ಶಿಕ್ಷಣ ಸ್ವಸ್ಥ ಸಮಾಜ ನಿರ್ಮಾಣ ಆಗುವಲ್ಲಿ ಮಹತ್ತರ ಪರಿಣಾಮಕಾರಿ ಯಲ್ಲದೆ ನಮ್ಮ ಸನಾತನ ಧರ್ಮದ ಕುರಿತು ಮತ್ತು ಮಕ್ಕಳಿಗೆ ಪುರಾಣ ಪುಣ್ಯ ಪುರುಷರ ಆದರ್ಶಗಳು ಈ ಯಕ್ಷಕಲೆಯಿಂದ ತಿಳಿದು ಕೊಂಡಾಗ ಬಾಲ್ಯದಲ್ಲೆ ಸಂಸ್ಕಾರ ಪ್ರಾಪ್ತಿಸುವುದು ಎಂದರು.
ವೇದಿಕೆಯಲ್ಲಿ ಸರಪಾಡಿ ಘಟಕದ ಅಧ್ಯಕ್ಷರಾದಶಶಿಕಾಂತ ಜೆ.ಶೆಟ್ಟಿ , ಚಿಣ್ಣರ ಲೋಕದ ಸ್ಥಾಪಕರಾದ ಮೋಹನ್ ದಾಸ್ ಕೊಟ್ಟಾರಿ, ರಾಮಕೃಷ್ಣ ರಾವ್,ಯಕ್ಷ ಶಿಕ್ಷಕ ಓಂ ಪ್ರಕಾಶ್ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ಎವ್ಳಿನ್ ಡಿ ಸೋಜ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಗೀತಾ ಪಿ. ವಂದಿಸಿದರು. ಗೌರವ ಶಿಕ್ಷಕಿ ಕು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.