ಬಂಟ್ವಾಳ ಎಸ್ ವಿ ಎಸ್ ದೇವಳ ಪದವಿ ಪೂರ್ವ ಕಾಲೇಜಿಗೆ ಚಾಲನೆ
ಬಂಟ್ವಾಳ : ನೂತನವಾಗಿ ಆರಂಭಗೊಂಡ ಬಂಟ್ವಾಳ ಶ್ರೀವೆಂಕಟ್ರಮಣಸ್ವಾಮಿ ದೇವಳ ಪದವಿ ಪೂರ್ವ ಕಾಲೇಜು ಸರಸ್ವತಿ ಪೂಜೆಯೊಂದಿಗೆ ಬುಧವಾರ ವಿಧ್ಯುಕ್ತವಾಗಿ ಬುಧವಾರ ಚಾಲನೆಗೊಂಡಿತು. 132 ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳ ಎಸ್.ವಿ.ಎಸ್. ದೇವಳ ಎಜುಕೇಶನ್ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನಿಂದ ಪದವಿಪೂರ್ವ ಕಾಲೇಜು ಆರಂಭಗೊಂಡಿದೆ.
ಅರ್ಚಕರಾದ ಮುರಳೀಧರ ಭಟ್ ಅವರು ವೈಧಿಕ ವಿಧಿವಿಧಾನ, ಸರಸ್ವತಿ ಪೂಜೆ ನೆರವೇರಿಸಿದರು.ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಅಶೋಕ ಶೆಣೈ, ಸಂಚಾಲಕ ಭಾಮಿ ನಾಗೇಂದ್ರನಾಥ ಶೆಣೈ, ಮ್ಯಾನೇಜಿಂಗ್ ಟ್ರಸ್ಟ್ ಸದಸ್ಯರಾದ ಸೂರ್ಯನಾರಾಯಣ ಬಾಳಿಗ , ಅವಿನಾಶ ಕಾಮತ್, ಲಕ್ಷ್ಮೀ ನಾರಾಯಣಯ್ಯ, ಬಿ.ಪ್ರಶಾಂತ ಪೈ, ಗಣೇಶ ಪೈ, ಸುಬ್ರಾಯ ನಾಯಕ್ ವೆಂಕಟ್ರಮಣ ಶೆಣೈ, ಭಾಮಿ ಲಕ್ಷ್ಮಣ ಶೆಣೈ, ಪ್ರಶಾಂತ ಕಿಣಿ,ಗಿರೀಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಕೋಶಾಧಿಕಾರಿ ಬಿ.ಸುರೇಶ್ ಬಾಳಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪನ್ಯಾಸಕರು , ಸಿಬ್ಬಂದಿಗಳು ಮತ್ತು ದೇವಸ್ಥಾನದ ಆಡಳಿತ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ನಾಯಕ್ ವಂದಿಸಿದರು.