ಕಳ್ಳಿಗೆ ಪೆರಿಯೋಡು ಬೀಡು ರಶ್ಮಿತಾಗೆ ಎಂ.ಎ ಹಿಂದಿಯಲ್ಲಿ ಚಿನ್ನದ ಪದಕ
ಬಂಟ್ವಾಳ: ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎ. ಹಿಂದಿ ಪರೀಕ್ಷೆಯಲ್ಲಿ ಕಳ್ಳಿಗೆ ಪೆರಿಯೋಡು ಬೀಡು ಬಳಿಯ ರಶ್ಮಿತಾ ಪ್ರಥಮ ರಾಂಕ್ ಮತ್ತು ಚಿನ್ನದ ಪದಕವನ್ನು ಪಡೆದಿದ್ದಾರೆ.
ಮೊಡಂಕಾಪು ಕಾರ್ಮೆಲ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ , ಅದೇ ಕಾಲೇಜುನಲ್ಲಿ ಪಿ.ಯು.ಸಿ ಶಿಕ್ಷಣ ಪಡೆದಿರುವ ಈಕೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಬಿ ಎಸ್ಸಿ ಪದವಿ ಪಡೆದಿರುತ್ತಾರೆ.ರಶ್ಮಿತಾ ಕಳ್ಳಿಗೆ ಪೆರಿಯೋಡುಬೀಡುರಮೇಶ್ ಭಂಡಾರಿ ಮತ್ತುಅನಿತಾ ಭಂಡಾರಿ ದಂಪತಿಯ ಪುತ್ರಿಯಾಗಿದ್ದಾಳೆ