ಪೆಜಕಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಜೂರಾದ ಒಂದು ಲಕ್ಷ ರೂ. ಚೆಕ್ ಸಮಿತಿಗೆ ಹಸ್ತಾಂತರ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಗ್ಗ ವಲಯದ ಚೆನ್ನೈತೋಡಿ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೆಜಕಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆಮಂಜೂರಾದ ಒಂದು ಲಕ್ಷ ರೂ.ವಿನ ಚೆಕ್ಕನ್ನು, ಶ್ರೀ.ಕ್ಷೇ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಅವರು ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭ ತಾಲೂಕಿನ ಯೋಜನಾಧಿಕಾರಿಯದ ಬಾಲಕೃಷ್ಣ , ಜನಜಾಗೃತಿ ವೇದಿಕೆಯ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ , ಆನಂದ ಆಚಾರ್ಯ, ಪಂಚಾಯಿತ್ ಸದಸ್ಯ ವಿನೋದ್, ದೇವಸ್ಥಾನದ ಅರ್ಚಕರಾದ ರಾಧಾಕೃಷ್ಣ ಭಟ್, ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಅರುಣ್ ಐತಾಳ್,ಒಕ್ಕೂಟದ ಅಧ್ಯಕ್ಷ ಕುಶಲ, ನಿಕಟಪೂರ್ವ ಅಧ್ಯಕ್ಷ ಬೂಬ ನಾಯಕ್, ಸಂಘದ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.