ಬಂಟ್ವಾಳ: ಬೆಂಜನಪದವು  ಸರಕಾರಿ ಪ್ರೌಢಶಾಲೆಯಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ಸಹಯೋಗದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.


 
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ವಾಮನ ಆಚಾರ್ಯ ಗಿಡಗಳನ್ನು ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.ಪ್ರಾಂಶುಪಾಲರಾದ ಕವಿತಾಹೇಮಚಂದ್ರ, ಬಂಟ್ವಾಳ ಅರಣ್ಯಾಧಿಕಾರಿಯವರಾದ ಪ್ರಜ್ವಲ್ ಶೆಟ್ಟಿ,ಕೃಷ್ಣ ಜೋಗಿ , ಜಿತೇಶ್ ,ರೊಟೇರಿಯನ್ ಪ್ರಕಾಶ್ ಬಾಳಿಗಾ,ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷರಾದರಾಧಾಕೃಷ್ಣ ತಂತ್ರಿ, ರಾಮದಾಸ ಸಾಲ್ಯಾನ್,ದಿನೇಶ್ ವಿಟ್ಲ,ಉಪ ಪ್ರಾಂಶುಪಾಲರಾದ  ಅನಂತಪದ್ಮನಾಭ ಶಿಬರೂರು ಉಪಸ್ಥಿತರಿದ್ದರು.
ಉಪನ್ಯಾಸಕ  ರವಿಚಂದ್ರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.ಅರಣ್ಯ ಇಲಾಖೆ ವತಿಯಿಂದ  ವಿದ್ಯಾರ್ಥಿಗಳಿಗೆ 50 ವಿವಿಧ  ಬಗೆಯ ಸಸಿಗಳನ್ನು ವಿತರಿಸಲಾಯಿತು 

By Suddi9

Leave a Reply

Your email address will not be published. Required fields are marked *