ಬಂಟ್ವಾಳ:ತಾಲೂಕಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಇ.ಡಿ.ಆರ್. ಟಿ ಸಂಸ್ಥೆ ವತಿಯಿಂದ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ  ನಡೆಯಿತು.

ಇದೇ ವೇಳೆ ಪುಸ್ತಕ ಮತ್ತು ಕ್ರೀಡಾ ಸಾಮಗ್ರಿಗಳನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ವಿತರಿಸಿದರು. 

ಸಂಸ್ಥೆ ಟ್ರಸ್ಟಿ ರತ್ನ ಶುಭ ಹಾರೈಸಿದರು. ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಆಚಾರ್ಯ ರಾಯಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಪ್ರಮುಖರಾದ ಪ್ರವೀಣ್ ಅಂಚನ್ ಕೊಯಿಲ, ಹೇಮಾ ಎಚ್.ರಾವ್ ಮತ್ತಿತರರು ಇದ್ದರು.

ಮುಖ್ಯಶಿಕ್ಷಕಿ ಜಾನೆಟ್ ಕೊನ್ಸೆಸೋ ಸ್ವಾಗತಿಸಿ, ಸಹಶಿಕ್ಷಕಿ ಬೇಬಿ ವಂದಿಸಿದರು. ಶಿಕ್ಷಕಿ ತನುಜಾ ಮತ್ತು ಸಿದ್ದಪ್ಪ ಕಡೂರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *