ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ಎಲ್ ಕೆಜಿ-ಯುಕೆಜಿ ಪ್ರಾರಂಭೋತ್ಸವಕ್ಕೆ ಚಾಲನೆ
ಬಂಟ್ವಾಳ:ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾಥರ್ಿಗಳಿಗೆ ಕೂಡಾ ಗುಣಮಟ್ಟದ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ಮತ್ತು ದೇಶೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಗುಣಶ್ರೀ ವಿದ್ಯಾಲಯ ಮಾಡುತ್ತಿದೆ ಎಂದು ಗುಣಶ್ರೀ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಗುರುವಾರ ನಡೆದ ‘ಎಲ್ ಕೆಜಿ- ಯುಕೆಜಿ ತರಗತಿ ಪ್ರಾರಂಭೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಪುಟಾಣಿ ಮಕ್ಕಳಿಗೆ ಗುಲಾಬಿ ಹೂವು ಮತ್ತು ಸಿಹಿತಿಂಡಿ ನೀಡಿ ಶಾಲೆಗೆ ಸ್ವಾಗತ, ಬಣ್ಣ ಬಣ್ಣದ ಬೆಲೂನ್ ಹಾರಾಟ, ಗೊಂಬೆ ಮತ್ತು ಯಕ್ಷಗಾನ ಪಾತ್ರಧಾರಿ ವಿದ್ಯಾಥರ್ಿಗಳು ಗಮನ ಸೆಳೆದರು.
ಟ್ರಸ್ಟಿ ವಿಜಯಕುಮಾರ್ ಚೌಟ, ಪ್ರಾಂಶುಪಾಲೆ ಲಾವಣ್ಯ, ಮುಖ್ಯಶಿಕ್ಷಕಿ ಜಯಶ್ರೀ, ಆಡಳಿತಾಧಿಕಾರಿ ಪೂಜಾ, ಉಪನ್ಯಾಸಕಿ ಅನುಷಾ ಶೆಟ್ಟಿ ಶುಭ ಹಾರೈಸಿದರು.
ಶಿಕ್ಷಕಿ ರೇಶ್ಮಲತಾ ಸ್ವಾಗತಿಸಿ, ಫ್ಲೇವಿ ಡಿಸೋಜ ಕೊಯಿಲ ವಂದಿಸಿದರು. ಶಿಕ್ಷಕಿ ಮಣಿ ಕಾರ್ಯಕ್ರಮ ನಿರೂಪಿಸಿದರು.