ಪ್ರಾಣಿ ವಧೆ ಕಾನೂನು ಕಟ್ಟುನಿಟ್ಟಾಗಿ ಪಾಲಿಸಿ
ಬಂಟ್ವಾಳ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ವಧೆ ನಿಷೇಧವಿದ್ದು,ಈ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಬಂಟ್ವಾಳ ಪ್ರಖಂಡದ ವತಿಯಿಂದ ಬಂಟ್ವಾಳ ಗ್ರಾಮಾಂತರ ಮತ್ತು ಬಂಟ್ವಾಳ ನಗರ ಠಾಣೆಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್,ಪ್ರಮುಖರಾದ ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ದೀಪಕ್ ಅಜೆಕಳ,ಅಭಿನ್ ರೈ, ಚಂದ್ರ ಕಲಾಯಿ, ಪ್ರಸಾದ್ ಬೆಂಜನಪದವು, ಸಂದೇಶ್ ಕಾಡಬೆಟ್ಟು,ಪ್ರತೀಕ್ ಅರಳ, ಮನೋಹರ್ ಕಲ್ಲಡ್ಕ ಮತ್ತಿತರು ಉಪಸ್ಥಿತರಿದ್ದರು.