ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಉತ್ಸವ
ಕೈಕಂಬ: ಪಲ್ಲಿಪಾಡಿ ಬಡಗಬೆಳ್ಳೂರಿನ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ.೨೧ರಂದು ಮಂಗಳವಾರ ನರಸಿಂಹ ಜಯಂತಿ ಉತ್ಸವ ನಡೆಯಲಿದೆ.

ನರಸಿಂಹ ಜಯಂತಿ ಪ್ರಯುಕ್ತ ದೇವಳದಲ್ಲಿ ಶ್ರೀ ದೇವರಿಗೆ ನರಸಿಂಹ ಯಾಗ ಪವಮಾನಾಭಿಷೇಕ, ರುದ್ರಾಭಿಷೇಕ, ಸೂಕ್ತಾಭಿಷೇಕ ನಡೆಯಲಿದ್ದು, ಸಂಜೆ ೪:೦೦ ಗಂಟೆಯಿಂದ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.