ನರಿಕೊಂಬು: ನವಜೀವನ ವ್ಯಾಯಾಮ ಶಾಲೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ
ಬಂಟ್ವಾಳ: ಇಲ್ಲಿನ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದ ಹನುಮಾನ್ ಮಂದಿರ ಲೋಕಾರ್ಪಣೆ ಪ್ರಯುಕ್ತ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಶನಿವಾರ ಸಂಜೆ ನಡೆಯಿತು.

ಇಲ್ಲಿಗೆ ಸಮೀಪದ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಬಳಿ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ದೇವಳದ ಮೊಕ್ತೇಸರ ಜನಾರ್ದನ ಭಟ್ ಚಾಲನೆ ನೀಡಿ ಶುಭ ಹಾರೈಸಿದರು. ಕೀಲುಕುದುರೆ, ಗೊಂಬೆ ಕುಣಿತ, ಚೆಂಡೆ, ವಾದ್ಯ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ, ಗೌರವಾಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್, ನವಜೀವನ ವ್ಯಾಯಾಮ ಶಾಲೆ ಅಧ್ಯಕ್ಷ ಶರತ್ ಎಚ್., ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಸಾಲಿಯಾನ್, ಪ್ರಮುಖರಾದ ನರ್ಸಪ್ಪ ಅಮೀನ್, ಬಾಲಕೃಷ್ಣ ಮಾಸ್ತರ್, ವೇದವ ಗಾಣಿಗ, ಆಶಾ ವೇದವ, ಅಶೋಕ್ ಮಂಜೇಶ್ವರ, ನಿತ್ಯಾನಂದ ಸಪಲ್ಯ, ಉಮೇಶ್ ನೆಲ್ಲಿಗುಡ್ಡೆ, ಗಣೇಶ ಕುಲಾಲ್, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಕಿಶೋರ್ ಶೆಟ್ಟಿ, ಮೋಹನದಾಸ ಕೊಟ್ಟಾರಿ ಮತ್ತಿತರರು ಇದ್ದರು.