ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ವತಿಯಿಂದ ವಿವಿಧ ಕೊಡುಗೆಗಳ ಹಸ್ತಾಂತರ
ಬಂಟ್ವಾಳ: ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ವತಿಯಿಂದ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಸಿದ್ದಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್‌ಅವರು ವಿವಿಧ ಕೊಡುಗೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಮೋಹನ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಮೇಜರ್ ಡೋನರ್ ಪ್ರಕಾಶ್ ಕಾರಂತ್, ಮೇಜರ್ ಡೋನರ್ ಭರತೇಶ್, ಅಸಿಸ್ಟೆಂಟ್‌ಗವರ್ನರ್ ಗಳಾದ ಡಾ.ರಮೇಶ, ರಾಘವೇಂದ್ರ ಭಟ್, ಝೋನಲ್ ಲೆಫ್ಟಿನೆಂಟ್ ಮೈಕಲ್ ಡಿ ಕೋಸ್ತ, ಜಿಎಸ್‌ಆರ್ ಜೆರಾಲ್ಡ್ ಡಿ ಕೋಸ್ತ, ಮೂಡುಬಿದಿರೆ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಡಾ.ಸುದೀಪ್, ಇನ್ನರ್ ವ್ಹೀಲ್ ನಿಕಟ ಪೂರ್ವ ಅಧ್ಯಕ್ಷೆ ಡಾ . ಸೀಮಾ ಸುದೀಪ್, ಸಿದ್ದಕಟ್ಟೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಗಣೇಶ್ ಶೆಟ್ಟಿ, ಇಲೆಕ್ಟೆಡ್ ಪ್ರೆಸಿಡೆಂಟ್ ಶಿವಯ್ಯ ಎಸ್.ಎಲ್, ಕೋಶಾಧಿಕಾರಿ ಪದ್ಮನಾಭ, ಸಾರ್ಜೆಂಟ್ ಆಫ್ ಅರ್ಮ್ಸ್ ಹರೀಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೊಲಿಗೆ ಯಂತ್ರಗಳನ್ನು ಅರ್ಹ ಮಹಿಳೆಯರಿಗೆ ಹಸ್ತಾಂತರಿಸಲಾಯಿತು. ವ್ಯಾಪ್ತಿಯ ೧೦ ಅಂಗನವಾಡಿ ಕೇಂದ್ರಗಳಿಗೆ ಸ್ಟೀಲ್ ಡಬ್ಬಗಳು, ಅಂಗನವಾಡಿ ಕೇಂದ್ರಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಧನ ಸಹಾಯ, ಹೊಕ್ಕಾಡಿಗೋಳಿ ಸ.ಹಿ.ಪ್ರಾ.ಶಾಲೆ, ಗುಂಡೂರಿ ಚೈತನ್ಯ ಸೇವಾಶ್ರಮಕ್ಕೆ ಆರ್ಥಿಕ ಧನ ಸಹಾಯ ವಿತರಿಸಲಾಯಿತು.
ಮುದ್ರಣ ಸಂಸ್ಥೆಯ ಸಂಧ್ಯಾ ನಯನ್ ಕುಮಾರ್, ಗುಂಡೂರಿ ಚೈತನ್ಯ ಸೇವಾಶ್ರಮದ ಸಂಚಾಲಕ ಹೊನ್ನಯ್ಯ ಕಾಟಿಪಳ್ಳ ಅವರನ್ನು ಸಮ್ಮಾನಿಸಲಾಯಿತು.
ಮೋಹನ್ ಮೂಲ್ಯ ಸ್ವಾಗತಿಸಿದರು. ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುನೀಲ್ ಸಿಕ್ವೇರಾ ವಂದಿಸಿದರು.