ಯುವಶಕ್ತಿ ಸೇವಾಪಥದಿಂದ ನಾಲ್ವರು ಫಲಾನುಭವಿಗಳಿಗೆ ಸಹಾಯಧನ ವಿತರಣೆ
ಬಂಟ್ವಾಳ: ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ ಇದರ ವತಿಯಿಂದ ಬಂಟ್ವಾಳ ತಾಲೂಕಿನ ಗೋಳ್ತಮುಜಲು ಗ್ರಾಮದ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜಾತ್ರೋತ್ಸವದಲ್ಲಿ ನಿಟಿಲಾಪುರದಿ ಸೇವಾವಾರಿಧಿ ಮೂಲಕ ಸಂಗ್ರಹಿಸಲ್ಪಟ್ಟ 88,101 ರೂ. ಸೇವಾ ನಿಧಿಯನ್ನು ಹಂಚಿಕೆ ಮಾಡಿ ಕ್ಷೇತ್ರದಲ್ಲಿ ಪ್ರಮುಖರ ಸಮಕ್ಷಮದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಫಲಾನುಭವಿಗಳಾದ ಆರುಷಿ ನೆಟ್ಲ ಅವರಿಗೆ 30 ಸಾ.ರೂ., ನಂದಕಿಶೋರ್ ಮಾಣಿಮಜಲ್ ಅವರಿಗೆ 25 ಸಾ.ರೂ., ಸಂತೋಷ್ ಕಲ್ಲಡ್ಕ ಅವರಿಗೆ 25 ಸಾ.ರೂ. ಹಾಗೂ ಕಾರ್ಯಕರ್ತರ ಕ್ಷೇಮ ನಿಧಿಗೆ 8101 ರೂ.ವನ್ನು ಹಸ್ತಾಂತರಿಸಲಾಯಿತು.

ಸಹಾಯಧನ ಪಡೆದ ಫಲಾನುಭವಿಗಳು ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವಶಕ್ತಿ ಸೇವಾಪಥದ ಪ್ರಮುಖರು ಉಪಸ್ಥಿತರಿದ್ದರು. ಯುವಶಕ್ತಿ ಸೇವಾ ಪಥದ ವತಿಯಿಂದ ಸಮಾಜದಿಂದ ಸಮಾಜಕ್ಕೆ ಇದುವರೆಗೆ ಸುಮಾರು 70 ಲಕ್ಷ ರೂ.ವನ್ನು ವಿವಿಧ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
