Published On: Fri, Mar 8th, 2024

ತಪೋವನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ ಆಚರಿಸಲಿದೆ ಇದರ ಸಲುವಾಗಿ ಪೊಳಲಿ ಶೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಚಂಡಿಕಾಹೋಮ ಹಾಗೂ ತಪೋವನದಲ್ಲಿ ಜೀವಂತ ದುರ್ಗಾ ಪೂಜೆ ನೆರವೇರಲಿದೆ.

ಮದ್ಯಾಹ್ನ ೧:೦೦ಗಂಟೆಯಿಂದ ೨:೦೦ರವರೆಗೆ ಡಾ. ಎಸ್.ಪಿ ಗುರುದಾಸ್ ಇವರಿಂದ ‘ರಾಷ್ಟ್ರ ಪ್ರೇರಕ ಸ್ವಾಮಿ ವಿವೇಕಾನಂದ’ ಹರಿಕಥೆ ನಡೆಯಲಿದೆ.

ಬಳಿಕ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮೈಸೂರಿನ ಸಂಚಾಲಕರು ಪೂಜ್ಯ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಆಶೀರ್ವಚನ ನೀಡಲಿರುವರು.

ಮುಖ್ಯ ಅಥಿತಿಯಾಗಿ ಎಂ.ಆರ್.ಜಿ. ಗ್ರೂಪ್ ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಆಗಮಿಸಲಿದ್ದಾರೆ ಎಂದು ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter