Published On: Mon, Mar 4th, 2024

ತುಂಬೆ: ಕೆ.ಎನ್ .ಗಂಗಾಧರ ಆಳ್ವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: ಜನ ಸಾಮಾನ್ಯರಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಕೊಡುಗೆ ಕೊಟ್ಟ ಬಿ ಎ ಶಿಕ್ಷಣ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಸುದೀರ್ಘ ಸೇವೆಗೈದ ಗಂಗಾಧರ ಆಳ್ವರ ಬೀಳ್ಕೊಡುಗೆಯೊಂದಿಗೆ ನಮ್ಮ ಮಣ್ಣಿನ ಸಂಸ್ಕೃತಿ ,ಆಚಾರ, ವಿಚಾರಗಳ ಪರಂಪರೆಯನ್ನು ಭವಿಷ್ಯದಲ್ಲು ನೆನಪಿನಲ್ಲಿಳಿಯುವಂತಾಗಿದೆ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಬಂಟ್ವಾಳ ತಾಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ ಎನ್ ಗಂಗಾಧರ ಆಳ್ವರು 32 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯ ಹಿನ್ನಲೆಯಲ್ಲಿ ಶನಿವಾರ ಸಂಜೆ ಕಾಲೇಜಿನಲ್ಲಿ ನಡೆದ  “ಗಂಗಾಭಿನಂದನಾ”ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲಾ ಶಿಕ್ಷಕರು,ವಿದ್ಯಾರ್ಥಿಗಳಿಗೆ ತನ್ನ ಜ್ಞಾನ ಭಂಡಾರವನ್ನು ಪ್ರೀತಿ,ವಿಶ್ವಾಸದಿಂದ   ಸೇವೆ ಸಲ್ಲಿಸಿದರ ಪಲವಾಗಿ ಇಂದು ಸಮಾಜ ಅವರನ್ನು ಗುರುತಿಸಿದೆ, ಅವರ ಸಮಾಧಾನ,ತಾಳ್ಮೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಉತ್ತಮ ನಡೆ ನುಡಿಯಿಂದ ಎಲ್ಲರಿಗೂ ಪ್ರೀತಿ ಪಾತ್ರರಾದ  ಗಂಗಾಧರ ಆಳ್ವರು ತನ್ನ ಪ್ರೌಡಿಮೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದವರು, ವೃತ್ತಿಯಲ್ಲಿ ನಿವೃತ್ತರಾದರೂ ಪ್ರವೃತ್ತಿಯಲ್ಲಿ ಇನ್ನು ಹೆಚ್ಚಿನ ಶೇಯಸ್ಸು ಸಿಗಲಿ ಎಂದು  ಹಾರೈಸಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ, ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ, ಮನುಷ್ಯನಿಗೆ ಅಭಿಮಾನದಿಂದ ಕೊಟ್ಟ ಗೌರವ ಯಾವತ್ತೂ ಮರೆಯಲು ಸಾಧ್ಯವಿಲ್ಲ,  32 ವರ್ಷದ ವೃತ್ತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದು ನುಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಒಳ್ಳೆಯ ಶಿಕ್ಷಕನಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರೀತಿ ಇರಬೇಕು, ಎರಡು ಗುಣವನ್ನು ಗಂಗಾಧರ ಆಳ್ವ. ಅವರು ಮೈಗೂಡಿಸಿದವರು ಎಂದು ಹೇಳಿದರು.

ಬಿ.ಎ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್‌ ಸಲಾಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಲ್ಬರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ ಎಲ್ ನರೇಂದ್ರ ನಾಯಕ್ ಶುಭ ಹಾರೈಸಿದರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ ಜಯಣ್ಣ, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಿ.ಎ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ.ಎಂ. ಅಶ್ರಫ್, ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಜ್ಯೋತಿಷಿ ಅನಿಲ್ ಪಂಡಿತ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್, ಮೋಹಿನಿ ಸುವರ್ಣ, ಜಯಾನಂದ ಸುವರ್ಣ ವೇದಿಕೆಯಲ್ಲಿದ್ದರು.

ದಿನೇಶ್ ಶೆಟ್ಟಿ ಅಳಿಕೆ ಪ್ರಸ್ತವಿಕವಾಗಿ ಮಾತನಾಡಿದರು, ನಿಯೋಜಿತ ಪ್ರಾಂಶುಪಾಲ ವಿ.ಸುಬ್ರಮಣ್ಯ ಭಟ್ ಸ್ವಾಗತಿಸಿ, ಕಚೇರಿ ಅಧಿಕ್ಷಕ ಅಬ್ದುಲ್ ಕಬೀರ್ ಧನ್ಯವಾದವಿತ್ತರು, ಕವಿತಾ ದೇವದಾಸ ಅರ್ಕುಳ ಹಾಗೂ ನೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter