ಮಟ್ಟಿ ಬ್ರಹ್ಮ ಕಲಶೋತ್ಸವ, ಧಾರ್ಮಿಕ ಸಭೆ, ಸನ್ಮಾನ
ಕೈಕಂಬ: ಜನಪ್ರತಿನಿಧಿನಗಳು ಕೇವಲ ರಾಜಕೀಯಕ್ಕಾಗಿ ಕುರ್ಚಿಗೆ ಆಂಟಿಕೊಳ್ಳುವುದಲ್ಲ ಬದಲಾಗಿ ಜನರ ಕೆಲಸ ಮಾಡಿಕೊಡುವುದು ಅವರ ಕರ್ತವ್ಯವಾಗಿದೆ. ರಸ್ತೆ, ಚರಂಡಿ ಯಾವ ಶಾಸಕನಾದರೂ ಮಾಡಬಹುದು ಆದರೆ ಜನರ ಹೃದಯಮಿಡಿತ ಅರಿತು ಅವರ ಭಾವನೆಗಳಿಗೆ ಸ್ಪಂದಿಸುವುದು ಅಗತ್ಯವಾಗಿದೆ.
ಊರಿನ ಅಭಿವೃದ್ಧಿಯ ಜತೆಗೆ ತಾನು ಸನಾತನ ಹಿಂದೂ ಧರ್ಮಿಯ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯ ಈಗಿನ ಕಾಲಘಟ್ಟದಲ್ಲಿ ಮೂಡಿದೆ.ಹಿಂದುವಾಗಿ ಇನ್ನೊಂದು ಧರ್ಮದ ಮೇಲೆ ಸವಾರಿ ಮಾಡುವ ಮನೋಸ್ಥಿತಿ ನಮ್ಮದಲ್ಲ ಎಲ್ಲರೂ ಒಂದಾಗಿ ಮುನ್ನಡೆಯುವ ಭಾವನೆ ನಮಗಿರಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಜೋಗಿಮಠ ಮಟ್ಟಿಯ ಶ್ರೀ ಕಾಲ ಭೈರವ ಮಂಜುನಾಥ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆಶೀರ್ವಚನ ನೀಡಿದ ಗುರುಪುರ ಉಪ್ಪುಗೋಡು ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾನವ ತಾನು ಮಾಡುವ ಒಳ್ಳೆಯ ಕೆಲಸಗಳಿಂದ ಸತ್ಕರ್ಮ ಫಲ ಸಂಪಾದನೆ ಮಾಡುವ ಮೂಲಕ ಪರಲೋಕದಲ್ಲಿ ತನ್ನ ಸ್ಥಾನ ಏನು ಎಂಬುದನ್ನು ತೀರ್ಮಾನ ಮಾಡುತ್ತಾನೆ.

ಕಾಲ ಪರಿವರ್ತನೆಯಾಗುವಾಗ ಅದರ ಜತೆಯಲ್ಲಿ ವ್ಯವಸ್ಥೆಗಳೂ ಬದಲಾಗುತ್ತಾ ಹೋಗುತ್ತದೆ ಭವ್ಯ ಭಾರತದ ಮೂಲ ಧರ್ಮದ ಉತ್ಖನನ ಮತ್ತು ಉದ್ದೀಪನದ ಕಾಲಘಟ್ಟ ಈ ಸಂಧರ್ಭದಲ್ಲಿ ನಡೆಯುತ್ತಿದೆ. ಪ್ರೇರಣೆ ದೇವರು ಕೊಡುತ್ತಾನೆ ಅದನ್ನು ಸರಿಯಾದ ಹಾದಿಯಲ್ಲಿ ಪಡೆದುಕೊಂಡರೆ ಜೀವನ ಉದ್ದೀಪನೆಯಾಗುತ್ತದೆ ಎಂದರು.
ದೀಪ ಬೆಳಗಿಸುವ ಮೂಲಕ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ್ ಸಭೆಯಲ್ಲಿ ಮಾತನಾಡಿದರು.
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರಿಯಂಗಳ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಗೋ ಸೇವಾ ಸಂಯೋಜಕ ಗಂಗಾಧರ್ ಪೆರ್ಮಂಕಿ, ಉಮಾವತಿ ಎಂ. ಶೆಟ್ಟಿ, ಜಯಂತ್ ಜೋಗಿ ಮೂಡುಶೆಡ್ಡೆ, ಆಡಳಿತ ಮೊಕ್ತೇಸರ ಗಂಗಾಧರ್ ಜೋಗಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ, ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಹರೀಶ್ ಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ, ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ನಾರಳ, ಕೋಶಾಧಿಕಾರಿ ಸೋಹನ್ ಅತಿಕಾರಿ ಇವರುಗಳನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ನಾರಳ ಪ್ರಾಸ್ತಾವಿಕ ಮಾತಾಡಿದರು. ಕೋಶಾಧಿಕಾರಿ ಸೋಹನ್ ಅತಿಕಾರಿ ಸ್ವಾಗತಿಸಿದರು.
ಸತೀಶ್ ಶೆಟ್ಟಿ ಕಂದಾವರ ಮತ್ತು ಜಯಕರ ಶೆಟ್ಟಿ ನಿರೂಪಿಸಿ, ವಂದಿಸಿದರು.