ಮಳಲಿ ಮಟ್ಟಿಯ ಶ್ರೀ ಮಂಜುನಾಥೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕದ ಪುಣ್ಯೋತ್ಸವ
ಕೈಕಂಬ: ಮಂಗಳೂರು ತಾಲೂಕಿನ ಜೋಗಿ ಮಠ, ಮಳಲಿ ಮಟ್ಟಿಯ ಶ್ರೀ ಮಂಜುನಾಥೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ
ರಾಜರಾಜೇಶ್ವರ ತಪೋನಿಧಿ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜಿ ಮಠಾಧಿಶರ ಮಾರ್ಗದರ್ಶನದಲ್ಲಿ ರಾಜಶ್ರೀ ಪದ್ಮವಿಭೂಷಣ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಬ್ರಹ್ಮಶ್ರೀ ವೇದ ವಿದ್ವಾನ್ ದೇರೆಬೈಲು ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ, ಉಮೇಶ್ನಾಥ್ ಕದ್ರಿ ಮತ್ತು ವಾಸ್ತುಶಿಲ್ಪಿ ಮಹೇಶ್ ಮುನಿಯಗಳ ಇವರ ಉಪಸ್ಥಿತಿಯಲ್ಲಿ ಸಹಸ್ರಾರು ಭಕ್ತ ಭಾವುಕರ ಸಮ್ಮುಖದಲ್ಲಿ ಶನಿವಾರ ಪೂರ್ವಾಹ್ನ 11:20ರಿಂದ ಮೇಷ ಲಗ್ನದಲ್ಲಿ ಬ್ರಹ್ಮ ಕಲಶಾಭಿಷೇಕ ವೈಭವದಿಂದ ನೆರವೇರಿತು.
ಪ್ರಾತ:ಕಾಲ 6ರಿಂದ ಪುಣ್ಯಾಹ, ದಶದಾನ, ಗೋಪೂಜೆ, ಕವಾಟೋದ್ಘಾಟನೆ ಮೊದಲಾದ ವೈದಿಕ ವಿಧಿ ವಿಧಾನಗಳು ನಡೆದವು.
ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು. ಆಡಳಿತ ಮೊಕ್ತೇಸರ ಗಂಗಾಧರ್ ಜೋಗಿ, ಅಧ್ಯಕ್ಷರು/ಪ್ರಧಾನ ಅರ್ಚಕ ಉಮೇಶ್ನಾಥ್ ಕದ್ರಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ ಮತ್ತು ಪದಾಧಿಕಾರಿಗಳು, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು, ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್, ಗಣನಾಥ ಭಂಡಾರಿ ಮಟ್ಟಿ, ವಿಶ್ವನಾಥ ಪೂಜಾರಿ ಮಟ್ಟಿ, ಎಚ್. ಕೆ. ಪುರುಷೋತ್ತಮ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ನಾರಳ, ಕಾರ್ಯದರ್ಶಿ ಹರೀಶ್ ಮಟ್ಟಿ ಕೋಶಾಧಿಕಾರಿ ಸೋಹನ್ ಅತಿಕಾರಿ ಮತ್ತು ಪದಾಧಿಕಾರಿಗಳು, ಸದಸ್ಯರು, ಉಪ ಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರುಗಳು, ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ ಸಹಿತ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.