Published On: Tue, Feb 13th, 2024

ಯುವವಾಹಿನಿ ಕುಪ್ಪೆಪದವು ಘಟಕದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಕೈಕಂಬ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕುಪ್ಪೆಪದವು ಘಟಕದ 2024-25 ನೇ ಸಾಲಿನ 6ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಪ್ಪೆಪದವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ನೂತನ ಪದಾಧಿಕಾರಿಗಳಿಗೆ ಪದ ಪ್ರದಾನಗೈದು, ಪ್ರತಿಜ್ಞಾ ವಿಧಿ ಬೊದಿಸಿ ಮಾತನಾಡಿದ ಯುವ ವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಿಲ್ಲವ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಂಚೂಣಿಗೆ ತರುವ ಕೆಲಸ ಮಾಡುತ್ತಿರುವ ಯುವ ವಾಹಿನಿ ರಾಜ್ಯಾದ್ಯoತ 33 ಘಟಕಗಳಲ್ಲಿ 3500 ಸದಸ್ಯರನ್ನು ಹೊಂದಿದೆ.

ಕುಪ್ಪೆಪದವಿನಂತಹ ಗ್ರಾಮೀಣ ಭಾಗದ ಘಟಕಗಳ ಸಮಾಜಮುಖಿ ಕಾರ್ಯಚಟುವಟಿಕೆಗಳು ಯುವವಾಹಿನಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂಡಿಗೆರಿಸುವಂತೆ ಮಾಡಿದೆ ಎಂದರು.

ಕಾರ್ಯಕ್ರಮವನ್ನು ಹಿರಿಯ ಬಿಲ್ಲವ ಮುಖಂಡರು ಹಾಗೂ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನ ಕುಪ್ಪೆಪದವು ಇದರ ಮೊಕ್ತೇಸರ ಕೆ. ಪುರುಷೋತ್ತಮ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ನಿರ್ಗಮನಾಧ್ಯಕ್ಷೆ ಸೌಮ್ಯ ಕೋಟ್ಯಾನ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಕುಪ್ಪೆಪದವು ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಜೆ ಮತ್ತು ನಿಯೋಜಿತ ಅಧ್ಯಕ್ಷ ಅಕ್ಷಿತ್ ಕುಮಾರ್ ಮಾತನಾಡಿ ಶುಭ ಹಾರೈಸಿದರು.

ಕಟೀಲು ಯಕ್ಷಗಾನ ಮೇಳದ ಹಿರಿಯ ಕಲಾವಿದ ಸುರೇಶ್ ಪೂಜಾರಿ ಬಳ್ಳಿ,, ಗ್ರಾಮ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಸೋಮಶೇಖರ್ ಕೊತ್ತಲಾಯಿ, ಯುವವಾಹಿನಿ ಕೇಂದ್ರ ಘಟಕದ ಅಧ್ಯಕ್ಷ ಹರೀಶ್ ಕೆ ಪೂಜಾರಿ ಮತ್ತು ನಿರ್ಗಮನಾಧ್ಯಕ್ಷೆ ಸೌಮ್ಯ ಕೋಟ್ಯಾನ್ ಅವರುಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಸಾಲಾಯಿತು.
ಘಟಕದ ಸದಸ್ಯರ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ನಿರ್ಗಮನ ಕಾರ್ಯದರ್ಶಿ ರಜನಿ ಕುಂದರ್, ಘಟಕದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು, ಘಟಕದ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಹೊಸಮನೆ ಮತ್ತು ಕೇಂದ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಘಟಕದ ಸದಸ್ಯರು, ಸಮಾಜ ಭಾಂಧವರು ಭಾಗವಹಿಸಿದ್ದರು. ಘಟಕದ ಮಾಜಿ ಅಧ್ಯಕ್ಷ ಅಜಯ್ ಅಮೀನ್ ನಾಗoದಡಿ ಪ್ರಾಸ್ತವಿಕ ಮಾತನಾಡಿದರು. ಘಟಕದ ಮಾಜಿ ಅಧ್ಯಕ್ಷ, ಚುನಾವಣಾಧಿಕಾರಿ ಜಗದೀಶ್ ದುರ್ಗಾಕೊಡಿ ನೂತನ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದರು.

ರಕ್ಷಿತ್ ಕುಮಾರ್ ಸ್ವಾಗತಿಸಿದರು, ಧನ್ಯಶ್ರೀ ಮುಗಿಲ ನಿರೂಪಿಸಿ, ನೂತನ ಕಾರ್ಯದರ್ಶಿ ರೇಣುಕಾ ಬಾಲಕೃಷ್ಣ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter