ಬ್ರಹ್ಮರಕೂಟ್ಲು: ಭಜನಾ ಮಂದಿರದ 52ನೇ ಏಕಾಹ ಭಜನಾ ಮಹೋತ್ಸವಕ್ಕೆ ಚಾಲನೆ, ಭಜನೆಯಿಂದ ಮನ ಹಾಗೂ ಮನೆಯ ಕಲ್ಮಶ ದೂರ: ಡಾ. ಧರ್ಮಪಾಲನಾಥ ಸ್ವಾಮೀಜಿ
ಬಂಟ್ವಾಳ: ಭಜನೆಯು ಶಕ್ತಿ ಪ್ರಧಾನವಾದ ಆಚರಣೆಯಾಗಿದೆ, ಭಜನಾ ಸಂಕೀರ್ತನೆಯಿಂದ ಮನ ಹಾಗೂ ಮನೆಯ ಕಲ್ಮಶ ದೂರವಾಗುತ್ತದೆ, ಯಾರಿಗೂ ಸಮಯವಿಲ್ಲದ ಈ ಆದುನಿಕ ಜಗತ್ತಿನಲ್ಲಿ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಋಷಿ ಮುನಿಗಳು ನಮಗೆ ಸಂಸ್ಕಾರಯುತವಾಗಿ ಬದುಕಲು ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ ಆದ್ದರಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಈ ಸಂದರ್ಭದಲ್ಲಿ ಶ್ರೀ ರಾಮನ ಆದರ್ಶ ಚಿಂತನೆಗಳನ್ನು ಪಾಲಿಸಿ ಜೀವನ ಸಾರ್ಥಕ್ಯ ಮಾಡೋಣ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪೂಜ್ಯ ಡಾ ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀ ಮೂಕಾಂಬಿಕಾ ಕೃಪಾ ಭಜನಾ ಮಂದಿರ (ರಿ)ಬ್ರಹ್ಮರಕೂಟ್ಲು ಇಲ್ಲಿ ಜ.5ರಂದು ಶುಕ್ರವಾರ ನಡೆದ 52ನೇ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ಎಂ. ಪಿ. ಸಿಲ್ಕ್ಸ್ ನ ಎಂ. ಪಿ. ದಿನೇಶ ಮಾತನಾಡಿ, ಹಿಂದೂ ಧರ್ಮದ ಆಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸಿದರೆ ಧರ್ಮ ನಮ್ಮನು ರಕ್ಷಣೆ ಮಾಡುತ್ತದೆ, ಭಗವದ್ಗೀತೆಯ ಸಾರವನ್ನು ಅರಿಯುವುದು ಇಂದಿನ ಅಗತ್ಯವಾಗಿದೆ ಎಂದರು.
ವೇದಿಕೆಯಲ್ಲಿ ಜ್ಯೋತಿಗುಡ್ಡೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಂಚಾಲಕ ನಾರಾಯಣ ನಾಯ್ಕ್, ಉದ್ಯಮಿ ಚಿತ್ತರಂಜನ್ ಸುವರ್ಣ ಮೂಡಬಿದಿರೆ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಕೇರಳ ಕೇಂದ್ರೀಯ ವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಚೇತನ್ ಮುಂಡಾಜೆ, ಆಡಳಿತ ಸಮಿತಿಯ ಗೌರವಧ್ಯಕ್ಷ ಶಶಿಧರ ಬ್ರಹ್ಮರಕೊಟ್ಲು, ವಾರ್ಷಿಕ ಏಕಾಹ ಭಜನಾ ಸಮಿತಿಯ ಅಧ್ಯಕ್ಷ ನಾಗೇಶ್ ಶೆಟ್ಟಿ ಪಿರಿಯೋಡಿ ಬೀಡು, ಶ್ರೀ ಮೂಕಾಂಬಿಕಾ ಮಾತೃ ಮಂಡಳಿಯ ಅಧ್ಯಕ್ಷೆ ಗೀತಾ ಆನಂದ ಪೆರಿಯೋಡಿ ಬೀಡು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬೆಳಿಗ್ಗೆ ಜಗನ್ಮಾತೆ ಶ್ರೀ ಮೂಕಾಂಬಿಕೆಯ ಪುನಃ ಬಿಂಬ ಪ್ರತಿಷ್ಠೆ, ಹಾಗೂ ಕಲಶಾಭಿಷೇಕವು ಪುರೋಹಿತ ರಾಜ ಭಟ್ ನೂಯಿ ಪೊಳಲಿ ಇವರ ನೇತೃತ್ವದಲ್ಲಿ ನಡೆಯಿತು.
ಮೂಕಾಂಬಿಕಾ ಕೃಪಾ ಭಜನಾ ಮಂದಿರದ ಅಧ್ಯಕ್ಷ ನವೀನ ಬಂಗೇರ ಪಲ್ಲ ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರ. ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿ, ವಾರ್ಷಿಕ ಭಜನಾ ಸಮಿತಿಯ ಪ್ರ. ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ ಧನ್ಯವಾದವಿತ್ತರು, ಅಕ್ಷಯ್ ಸರಿಪಲ್ಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಕಲಿಯುಗದ ಮಾಯ್ಕರೆ”ತುಳು ಪೌರಾಣಿಕ ನಾಟಕ ನಡೆದು ಜನ ಮೆಚ್ಚುಗೆ ಪಡೆಯಿತು.