ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರ ಅವಿರೋಧವಾಗಿ ಪುನರಾಯ್ಕೆಗೊಂಡರು.
ಸಮಿತಿಯ ೨೮ನೇ ವಾರ್ಷಿಕ ಮಹಾಸಭೆಯು ಡಾ.ಎನ್ ನರಸಿಂಹ ಹೊಳ್ಳ ಕಲಾವೇದಿಕೆಯಲ್ಲಿ ಜರಗಿದ್ದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಶೇಖರ್ ಕುಲಾಲ್, ಕೋಶಧಿಕಾರಿಯಾಗಿ ಎ.ದಾಮೋದರ್, ಉಪಾಧ್ಯಕ್ಷರಾಗಿ ಪ್ರಿಯಲತಾ ವಾಮನ, ಕ್ರೀಡಾಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾಗಿ ನರಸಿಂಹರಾಜ್ ಹೊಳ್ಳ ಆಯ್ಕೆಯಾದರು.