ಕಾಗೆಗಳಿದ್ದರೆ ಮಾತ್ರ ಕೋಗಿಲೆಗಳ ಇಂಪಾದ ಸ್ವರ ಕೇಳಲು ಸಾಧ್ಯ-ನಿತ್ಯಾನಂದ ಶೆಟ್ಟಿ
ಬಂಟ್ವಾಳ: ಕಾ ಕಾ ಎಂದು ಕೂಗುವ ಕಾಗೆ ಬಣ್ಣದಲ್ಲಿ ಕಪ್ಪೆಂದು ಅವುಗಳನ್ನು ದೂರಕ್ಕೆ ಓಡಿಸಿದರೆ ಕೋಗಿಲೆಯ ಕುಹೂ ಕುಹೂ ಎಂಬ ಇಂಪಾದ ಸ್ವರ ಕೇಳಲು ಸಾಧ್ಯವಿಲ್ಲ.
ಅಭಿವೃದ್ಧಿಯ ಧಾವಂತದಲ್ಲಿ ಸ್ವರ ಸಾಮ್ರಾಜ್ಯ ನಿರ್ಮಾಣ ಮಾಡುವ ಪಕ್ಷಿಗಳ ಪಾಲಿಗೆ ನಾವು ಉರುಳಾಗಬಾರದು ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಬಂಟ್ವಾಳ ತಾಲೂಕಿನ ಪಕ್ಕಲಪಾದೆ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ನಡೆದ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರಾತ್ಯಕ್ಷಿಕೆ ಮೂಲಕ ಪಕ್ಷಿಗಳಿಗೆ ನೀರು ಹಾಗೂ ಕೃತಕ ಗೂಡುಗಳನ್ನು ಇರಿಸುವ ಕ್ರಮಗಳನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದರು.
ಮುಖ್ಯ ಶಿಕ್ಷಕಿ ರೇಷ್ಮ ಸೀಕ್ವೇರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.