ವಾಲಿಬಾಲ್ 17 ಮತ್ತು 19 ವಯೋಮಾನದ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕು ಬಾಲಕರ ತಂಡ ಪ್ರಥಮ
ಬಂಟ್ವಾಳ: ದ. ಕ. ಜಿಲ್ಲಾ ವಾಲಿಬಾಲ್ ಸಂಸ್ಥೆ ಮತ್ತು ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಹಾಗೂ ಸುದಾನ ವಸತಿಯುತ ಶಾಲೆಯ ಆಶ್ರಯದಲ್ಲಿ ಪುತ್ತೂರು ಸುದಾನ ವಸತಿಯುತ ಶಾಲಾ ಮೈದಾನದಲ್ಲಿ ನಡೆದ 14,17 ಮತ್ತು19 ವಯೋಮಾನದ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಬಾಲಕ-ಬಾಲಕಿಯರ ವಾಲಿ ಬಾಲ್ ಪಂದ್ಯಾಟದಲ್ಲಿ 17 ಮತ್ತು19 ವಯೋಮಾನದ ಬಾಲಕರ ವಿಭಾಗದಲ್ಲೆರಡರಲ್ಲು ಬಂಟ್ವಾಳ ತಾಲೂಕು ಬಾಲಕರ ತಂಡ ಪ್ರಥಮ ಸ್ಥಾನಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ದ. ಕ. ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಸತೀಶ ಕುಮಾರ್ ಹಾಗೂ ಕಾರ್ಯದರ್ಶಿ ಶಂಕರ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ವಿಜೇತ ತಂಡವನ್ನು ವಿದ್ಯಾರ್ಥಿಗಳ ತರಬೇತುದಾರರು ಅಭಿನಂದಿಸಿದ್ದಾರೆ.