ಕರಾವಳಿ ಕಲೋತ್ಸವ 24 : ಕರಾವಳಿ ಸರಿಗಮಪ ಸೀಸನ್ 5 ರ ರಾಜ್ಯಮಟ್ಟದ ಸಂಗೀತ ಸ್ಪರ್ಧೆ
ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕದ ಮೋಕೆದ ಕಲಾವಿದೆರ ಸೇವಾ ಟ್ರಸ್ಟ್ ( ರಿ.)ಬಂಟ್ವಾಳ, ಚಿಣ್ಣರ ಲೋಕ ಸೇವಾ ಬಂಧು( ರಿ) ಬಂಟ್ವಾಳ ಇದರ ಸಂಯುಕ್ತಾಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾಕ್೯ ಮೈದಾನದಲ್ಲಿ ನಡೆಯುವ ಕರಾವಳಿ ಕಲೋತ್ಸವ 24 ಇದರ ವತಿಯಿಂದ ಆಯೋಜಿಸಲಾದ ಕರಾವಳಿ ಸರಿಗಮಪ ಸೀಸನ್ 5 ರ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಯ 74 ಮಂದಿ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದು, ಆಡೀಷನ್, ಮೇಘಾ ಆಡಿಷನ್, ಸೆಮಿಪಿನಾಲೆ, ಪಿನಾಲೆ ಹೀಗೆ 4 ಹಂತಗಳಲ್ಲಿ ಸ್ಫರ್ಧೆ ನಡೆದಿತ್ತು. ಹೆಸರಾಂತ ನಿರ್ಣಾಯಕ ಸುಹಾಸ್ ಕೌಶಿಕ್ ಮಣಿಪಾಲ್ ಹಾಗೂ ಪಲ್ಲವಿ ಪ್ರಭು ಅವರು ತೀರ್ಪುಗಾರರಾಗಿದ್ದರು.
ಜ್ಯೂನಿಯರ್ ವಿಭಾಗದಲ್ಲಿ ಉಡುಪಿಯ ಪರ್ಜನ್ ರಾವ್ ಪ್ರಥಮ ಸ್ಥಾನ ಪಡೆದರೆ, ಶ್ರೀವಿಭಾ ವಿಟ್ಲ ದ್ವಿತೀಯ ಹಾಗೂ ಮೇಘನಾ ರಾವ್ ಬಂಟ್ವಾಳ ತೃತೀಯ ಬಹುಮಾನ ಪಡೆದರು. ಇವರಿಗೆ ನಗದು, ಟ್ರೋಪಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಸೀನಿಯರ್ ವಿಭಾಗದಲ್ಲಿ ಕಾಸರಗೋಡಿನ ಶ್ರೀರಕ್ಷಾ ಸರ್ಪಂಗಳ ಪ್ರಥಮ ಸ್ಥಾನ ಗಳಿಸಿದರೆ, ಮಂಗಳೂರಿನ ಯಶಸ್ ರಾವ್ ದ್ವಿತೀಯ ಹಾಗೂ ಕಾಸರಗೋಡಿನ ಜ್ಞಾನಕುಮಾರ್ ತೃತೀಯ ಬಹುಮಾನ ಪಡೆದರು. ಇವರಿಗೆ ನಗದು,ಟ್ರೋಪಿ,ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಚಿಣ್ಣರ ಅಧ್ಯಕ್ಷೆ ಕು.ಶ್ರೀನಿಧಿ ಬಿ.ಸಿ.ರೋಡು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ)ನ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಹಾಗೂ ಪದಾಧಿಕಾರಿಗಳಾದ ಇಬ್ರಾಹಿಂ ಕೈಲಾರ್, ಫೌಝೀಯ ಮೊದಲಾದವರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.