ಪಿಲಾತಬೆಟ್ಟು ವ್ಯ.ಸೇ.ಸಂಘಕ್ಕೆ ಚುನಾವಣೆ ಸಹಕಾರ ಭಾರತಿಯ 12 ಮಂದಿ ಬೆಂಬಲಿತರಿಗೆ ಭರ್ಜರಿ ಗೆಲುವು
ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಸಹಿತ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ೧೩ ಮಂದಿ ಕೂಡ ಅಭೂತಪೂರ್ವ ಗೆಲುವು ದಾಖಲಿಸಿದ್ಡಾರೆ.
ಉಳಿದಂತೆ ಒಂದು ಸ್ಥಾನಕ್ಕೆ ಡಾ.ರಾಮಕೃಷ್ಣ ಅವರು ಗೆಲುವು ಸಾಧಿಸಿದ್ದಾರೆ. ಸಂಘದ ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಸಹಕಾರ ಭಾರತಿಯಿಂದ ಚಂದ್ರಶೇಖರ ಶೆಟ್ಟಿ, ಎಂ. ತುಂಗಪ್ಪ ಬಂಗೇರ, ರವಿಶಂಕರ್ ಹೊಳ್ಳ, ನಾರಾಯಣ ಪೂಜಾರಿ, ಲಕ್ಷ್ಮೀನಾರಾಯಣ ಹೆಗ್ಡೆ, ಶಿವಯ್ಯ ಪರವ, ಸುಂದರ ನಾಯ್ಕ, ಪ್ರಭಾಕರ ಪಿ.ಎಂ., ಶುಭಕರ ಶೆಟ್ಟಿ, ಸರೋಜಿನಿ ಡಿ. ಶೆಟ್ಟಿ, ಹರ್ಷಿಣಿ ಪುಷ್ಪಾನಂದ, ಶಶಿಧರ ನಾಯ್ಕ ಅವರು ಗೆಲುವು ಸಾಧಿಸಿದವರಾಗಿದ್ದಾರೆ.
ಸಹಕಾರಿ ಸಂಘಗಳ ಅಧಿಕಾರಿ ಎನ್.ಜೆ.ಗೋಪಾಲ್ ಅವರು ಚುನಾವಣಾಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಬಬಿತಾ.ಡಿ. ಮತ್ತು ಸಿಬಂದಿ ವರ್ಗ ಸಹಕರಿಸಿದರು.