Published On: Tue, Jan 9th, 2024

ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಂಸ್ಕಾರ ಕಲಿಸುವ ತಾಣಗಳಾಗಬೇಕು: ಒಡಿಯೂರು ಶ್ರೀ

ಬಂಟ್ವಾಳ: ಜೀವನದಲ್ಲಿ ಮಾನವೀಯತೆ ಗುಣವನ್ನು ಮೈಗೂಡಿಸಿಕೊಳ್ಳಬೇಕು, ನಾವು ನಮ್ಮದು ಎನ್ನುವುದೇ ನಿಜವಾದ ಭಾರತೀಯತೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಉತ್ತಮ ಸಂಸ್ಕಾರ ಕಲಿಸುವ ತಾಣಗಳಾಗಬೇಕು ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ಇದರ ವತಿಯಿಂದ ನೂತನವಾಗಿ ನಿರ್ಮಿಸಲಾದ ವ್ಯಾಯಮ ಶಾಲೆ ಹಾಗೂ ಸಭಾಭವನ್ನು ಲೋಕಾರ್ಪಣೆಗೊಳಿಸಿ ಶ್ರೀಗಳು ಆಶೀರ್ವಚನಗೈದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲೋಟಸ್ ಗ್ರೂಪ್ ನ ಜಿತೇಂದ್ರ ಎಸ್. ಕೊಟ್ಟಾರಿ ಸಭಾಧ್ಯಕ್ಷತೆ ವಹಿಸಿದ್ದರು.      
ಮೊಗರ್ನಾಡ್ ವೇದಮೂರ್ತಿ ಜನಾರ್ಧನ ವಾಸುದೇವ ಭಟ್ ಅವರು ಸಮುದಾಯ ಭವನ ಹಾಗೂ ಎರಕಳ ದಿವಂಗತ ಬಿ. ಗಣೇಶ ಸೋಮಯಾಜಿ ವೇದಿಕೆಯನ್ನು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರಿನ ಆಡಳಿತ ಮುಖ್ಯಸ್ಥ ಬಿ ರಘುನಾಥ ಸ್ವಾಮೀಜಿ   ಅನಾವರಣಗೊಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ವರ್ತಮಾನ ಕಾಲದಲ್ಲಿ ಒಳ್ಳೆಯ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ, ವ್ಯಾಯಾಮ ಶಾಲಾ ಯುವಕರು ಸುಂದರ ಸಮಾಜ ನಿರ್ಮಾಣದ ಪಾತ್ರಧಾರಿಗಳಾಗಬೇಕು ಎಂದರು. 

ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ದುಡಿದ ಹಿರಿಯ ಸದಸ್ಯರಾದ ಆನಂದ ನಾಯ್ಕ್ ಮಾರುತಿನಗರ, ಅಶೋಕ್ ಟೈಲರ್ ಕರ್ಬೇಟ್ಟು, ಬಾಬು ಪೂಜಾರಿ ಕೋಡಿಮಾಜಲ್, ಕೃಷ್ಣಪ್ಪ ಡ್ರೈವರ್ ಮಾರುತಿನಗರ, ಮೋಹನ್ ಆಚಾರ್ಯ ಮಾರುತಿನಗರ, ಮಂಜುನಾಥ ನಾಯ್ಕ್ ಮಾರುತಿನಗರ, ಸುಖೀರ್ತಿ  ಜೈನ್ ಮಣಿಮಜಲ್, ಜಯಾನಂದ ಸಫಲ್ಯ ಬಂಟ್ವಾಳ, ಪುರುಷೋತಮ ಎಸ್ ಮಣಿಮಜಲ್, ಸದಾನಂದ ಪೂಜಾರಿ ಕೋಡಿಮಜಲ್, ಪದ್ಮನಾಭ ಸಫಲ್ಯ ಮಾರುತಿನಗರ, ಪ್ರಭಾಕರ ಪೂಜಾರಿ ಕೋಡಿಮಜಲ್, ಸುಬ್ಬಣ್ಣ ನಾಯ್ಕ್ ಮಾರುತಿನಗರ, ಹಾಗೂ ಕ್ರೀಡಾಪಟು ಸಂತೋಷ್ ಮಣಿಮಜಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಜಗನಾಥ್ ಬಂಗೇರ ನಿರ್ಮಾಲ್, ಪದ್ಮನಾಭ ಮಯ್ಯ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾದವ ಗೌಡ, ಹರೀಶ್ ಪುತ್ರೂಟ್ಟಿಬೈಲು, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಕೋಡಿಮಜಲು, ಶುಭ ಶಶಿಧರ್, ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.) ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ಜೆ. ಮೊದಲದವರು ಉಪಸ್ಥಿತರಿದ್ದರು.

ವೇದಮೂರ್ತಿ ರಾಜಗೋಪಾಲಾಚಾರ್ಯ ನರಿಕೊಂಬುರವರ  ಪೌರೋಹಿತ್ಯದಲ್ಲಿ ವೈಧಿಕ ವಿಧಿವಿಧಾನಗಳು ನೆರವೇರಿತು.

ಹಂಸಿನಿ ಹಾಗೂ ಮೋನಿಷಾ ಪ್ರಾರ್ಥಿಸಿದರು, ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಮಣಿಮಜಲ್ ಸ್ವಾಗತಿಸಿ, ಕೋಶಾಧಿಕಾರಿ ಯಾದವ ಕುಲಾಲ್ ಪ್ರಸ್ತಾವಿಸಿದರು. ನಯನ ಯಾದವ್ ವಂದಿಸಿ, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter