ತುಂಬೆ ಸರಕಾರಿ ಶಾಲೆ ನೂತನ ಕಟ್ಟಡಕ್ಕೆ ಗರಿಷ್ಠ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಯು.ಟಿ.ಖಾದರ್
ಬಂಟ್ವಾಳ: ತುಂಬೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಯು.ಟಿ.ಖಾದರ್ ಮಾತನಾಡಿ ತುಂಬೆ ಸರಕಾರಿ ಶಾಲೆ ನೂತನ ಕಟ್ಟಡಕ್ಕೆ ಗರಿಷ್ಠ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತುಂಬೆ ಜನತೆಯ ಪರವಾಗಿ ವಿಧಾನ ಸಭಾಧ್ಯಕ್ಷರನ್ನು ಸಮ್ಮಾನಿಸಲಾಯಿತು. ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ತುಂಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರವೀಣ್ ತುಂಬೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ತುಂಬೆ ಗ್ರಾ.ಪಂ.ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಮುಖ್ಯ ಶಿಕ್ಷಕಿ ಶಕುಂತಳಾ ಎಸ್.ಉಳ್ಳಾಲ್, ಎಸ್‌ಡಿಎಂಸಿ ಅಧ್ಯಕ್ಷ ಕರೀಂ, ಗ್ರಾ.ಪಂ.ಸದಸ್ಯರಾದ ಇಬ್ರಾಹಿಂ ವಳವೂರು, ಅಜೀಝ್ ತುಂಬೆ, ಶಶಿಕಲಾ ಮನೋಹರ್ ಕೊಟ್ಟಾರಿ, ಜಯಂತಿ ನಾಗೇಶ್, ಜಯಂತಿ ಶ್ರೀಧರ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷ ಮನೋಹರ ಕೊಟ್ಟಾರಿ, ಕೋಶಾಧಿಕಾರಿ ದಿನೇಶ್ ಪರ್ಲಕ್ಕೆ, ಹಿರಿಯರಾದ ಮೋನಪ್ಪ ಬೆಳ್ಚಡ, ಪ್ರಕಾಶ್ ಬಿ.ಶೆಟ್ಟಿ, ಗೋಪಾಲಕೃಷ್ಣ ಸುವರ್ಣ, ರಮೇಶ್ ಎಂ.ತುಂಬೆ, ಅನಿಲ್ ಪಂಡಿತ್, ಗಂಗಾಧರ ಅಮೀನ್, ಅರಾಫ ಅಬ್ದುಲ್ ಲತೀಫ್, ನಿವೃತ್ತ ಮುಖ್ಯ ಶಿಕ್ಷಕರಾದ ಬಾಬು, ಶಿವರಾಮ, ಹರೀಶ್ ರೊಟ್ಟಿಗುಡ್ಡೆ, ಜಗದೀಶ್ ಗಟ್ಟಿ, ಅಲ್ತಾಫ್ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ ಸುವರ್ಣ ಸ್ವಾಗತಿಸಿದರು. ಸದಾಶಿವ ಡಿ.ತುಂಬೆ ವಂದಿಸಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಳೆ ವಿದ್ಯಾರ್ಥಿ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಂಡಿತು.