ಕಾವಳಕಟ್ಟೆ ಮೂಡೂರು ಫ್ರೆಂಡ್ಸ್: ದಶಮಾನೋತ್ಸವ
ಬಂಟ್ವಾಳ: ಕಾವಳ ಮೂಡೂರು ಗ್ರಾಮದ ಕಾವಳಕಟ್ಟೆ ಮೂಡೂರು ಫ್ರೆಂಡ್ಸ್ ಇದರ ದಶಮಾನೋತ್ಸವ ಕಾರ್ಯಕ್ರಮ ಕಾವಳಕಟ್ಟೆ ಶ್ರೀ ರಾಜನ್ ದೈವ ಕೊಡಮಣಿತ್ತಾಯ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ಪಾರ್ಶ್ವನಾಥ ಪಡಂತ್ರಬೆಟ್ಟು ಗುತ್ತು, ಇಸ್ಮಾಯಿಲ್ ಸಿದ್ದಿಕ್,ವಿಶ್ವನಾಥ ಪೂಜಾರಿ ಪೀರ‍್ಯಗುತ್ತು, ಬಾಲಕೃಷ್ಣ ಅಂಚನ್, ಸುಧಾಕರ ಶೆಣೈ, ದೀಪಕ್ ಕುಮಾರ್ ಜೈನ್, ಹೇಮಂತ ಕುಮಾರ್, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಕ್ಲಬ್ ಪದಾಧಿಕಾರಿಗಳಾದ ಪ್ರಸಾದ್ ಎನ್.ಸಿ.ರೋಡ್, ಜಯರಾಮ ಕರೆಂಕಿಲ, ಪ್ರವೀಣ್ ದೇವಾಡಿಗ, ಚಂದ್ರಹಾಸ ಬಿಯನಡ್ಕ, ಸುಜೀತ್ ದೇವಾಡಿಗ ಮತ್ತಿತರರಿದ್ದರು.
ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಬಳಿಕ ಸಂಗೀತ ರಸಮಂಜರಿ ಹಾಗು ನೃತ್ಯ ಕಾರ್ಯಕ್ರಮ ನಡೆಯಿತು.