ಮಂಗಳೂರು ಸಿಂಡಿಕೇಟ್ ಸದಸ್ಯರಾಗಿ ನ್ಯಾಯವಾದಿ ಸುರೇಶ್ ಕುಮಾರ್ ಸೇರಿ 6 ಮಂದಿ ನೇಮಕ
ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಬಿ.ಸಿ.ರೋಡಿನ ಯುವ ನ್ಯಾಯವಾದಿ, ನೋಟರಿ ಸುರೇಶ್ ಕುಮಾರ್ ನಾವುರು ಅವರನ್ನು ನೇಮಕಗೊಳಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.

ಇವರು ಬಂಟ್ವಾಳ ಸಮೀಪದ ನಾವೂರು ಗ್ರಾಮದ ನಿವಾಸಿಯಾಗಿದ್ದು, ಬಂಟ್ವಾಳ ಜೇಸಿಸ್ ನ ಪೂರ್ವಾಧ್ಯಕ್ಷರಾಗಿದ್ದು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರು ಆಗಿದ್ದಾರೆ. ರೋಟರಿ ಕ್ಲಬ್ ಟೌನ್ ನಲ್ಲು ಸದಸ್ಯರಾಗಿರುವ ಅವರು ಹಲವಾರು ಸಂಘ ಸಂಸ್ಥೆಯಲ್ಲು ತೊಡಗಿಸಿಕೊಂಡಿದ್ದಾರೆ.
ಇವರ ಜೊತೆ ಸಿ.ಎ.ನಿತೀನ್ ಶೆಟ್ಟಿ ಮಂಗಳೂರು, ಕುಂದಾಪುರ ತಾ.ನ ಮಜೂಡಿತ್ ಮೆಂಡೋನಿಕ, ಮಂಗಳೂರು ಕದ್ರಿ ಕಂಬಳದ ರಘುರಾಜ್, ಉಳ್ಳಾಲ ತಾ.ನ ಕೋಣಾಜೆ ಕೆಳಗಿನ ಮನೆ ನಿವಾಸಿ ಅಚ್ಯುತ ಗಟ್ಟಿ ಹಾಗೂ ಸುಳ್ಯ ತಾಲೂಕಿನ ಗಾಂಧಿನಗರ ನಿವಾಸಿ ಸುವಾದ್ ಸುಳ್ಯ ಅವರು ಸೇರಿ ಒಟ್ಟು 6 ಮಂದಿಯನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.