ರಾಮಕೃಷ್ಣ ತಪೋವನದಲ್ಲಿ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನಾಚರಣೆ ಹಾಗೂ ಕಲ್ಪತರು ದಿನಾಚರಣೆ
ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಜ.೩ರಂದು ಬುಧವಾರ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನವನ್ನು ಆಚರಿಸಲಾಯಿತು.

ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಗ್ಗೆ ೫:೦೦ಗಂಟೆಯಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ೯:೩೦ರಿಂದ ೧೦:೩೦ರವರೆಗೆ ವಿಶೇಷ ಭಜನೆ, ೧೦:೩೦ರಿಂದ ಹೋಮ ಮಧ್ಯಾಹ್ನ ೧೨:೩೦ಕ್ಕೆ ಆರತಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಡಿ.10ರಂದು ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.


ಸುಮಾರು 800 ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜ.೧ರಂದು ಸೋಮವಾರ ಕಲ್ಪತರು ದಿನವನ್ನು ಆಚರಿಸಲಾಯಿತು. ಬೆಳಗ್ಗೆ ೬:೦೦ರಿಂದ ರಾತ್ರಿ ೮:೦೦ರವರೆಗೆ ವಿವಿಧ ೧೪ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನೆರವೇರಿತು.

