ಗೋಳಿದಡಿಗುತ್ತಿನ ವಾರ್ಷಿಕ ಹಬ್ಬದ ಸಮಿತಿಗಳ ಅಂತಿಮ ಸುತ್ತಿನ ಸಭೆ
ಕೈಕಂಬ: ಗುರುಪುರ ಗೋಳಿದಡಿಗುತ್ತಿನಲ್ಲಿ ಜ. ೧೯ರಿಂದ ೨೧ರವರೆಗೆ ನಡೆಯಲಿರುವ ʼಗುತ್ತುದ ವರ್ಸೊದ ಪರ್ಬೊ’ ಪ್ರಯುಕ್ತ ಜ. ೭ರಂದು ಸಂಜೆ ಗುತ್ತಿನ ಚಾವಡಿಯಲ್ಲಿ ಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳ ಅಂತಿಮ ಸುತ್ತಿನ ಸಮಾಲೊಚನಾ ಸಭೆ ನಡೆಯಿತು.
ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಇದೊಂದು ದೈವ-ದೇವತಾ ಕಾರ್ಯವಾಗಿದ್ದು, ಪರ್ಬದ ಮೂರೂ ದಿನಗಳಲ್ಲಿ ಅತಿಥಿಗಳ ಸತ್ಕಾರ ವಿಷಯದಲ್ಲಿ ಯಾವುದೇ ರೀತಿಯ ಕುಂದು-ಕೊರತೆ ಅಥವಾ ನ್ಯೂನತೆಗಳು ಕಂಡು ಬರಕೂಡದು. ಎಲ್ಲ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರಲ್ಲಿ ಈ ಎಚ್ಚರ ಇರಲಿ ಎಂದರು.
ಡಾ. ಸಮನಾ ಶೆಟ್ಟಿ ಸ್ವಾಗತಿಸಿದರು. ವಿವಿಧ ಸಮಿತಿಗಳ ಪ್ರಮುಖರು ತಮ್ಮ ಜವಾಬ್ದಾರಿಗಳು ಮತ್ತು ಈವರೆಗೆ ನಡೆಸಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಗುತ್ತಿನ ಚಾವಡಿ ಮಿತ್ರರು, ಗಣ್ಯರು ಉಪಸ್ಥಿತರಿದ್ದರು. ಸುನೀಲಾ ಪ್ರಭಾಕರ ಶೆಟ್ಟಿ ವಂದಿಸಿದರು.